ಭುವನೇಶ್ವರ: ಪತಿ ಮಹಾಶಯನೊಬ್ಬ ಹೋಟೆಲ್ ರೂಂ ನಲ್ಲಿ ಇಬ್ಬರು ಯುವತಿಯರೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದಾಗಲೇ ಪೊಲೀಸರ ಜೊತೆ ಪತ್ನಿ ಎಂಟ್ರಿ ಕೊಟ್ಟಿದ್ದು, ಪತಿಯ ಮೋಸದಾಟವನ್ನು ಬಯಲು ಮಾಡಿದ್ದಾಳೆ.
ಒಡಿಶಾದ ಭುವನೇಶ್ವರದ ಪಾಟಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪತಿ ಹೋಟೆಲ್ ರೂಂ ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಹಿಳೆ, ಪೊಲೀಸರ ಜೊತೆ ಹೋಟೆಲ್ ರೂಂ ಗೆ ದಿಢೀರ್ ಭೇಟಿ ಕೊಟ್ಟಿದ್ದಾಳೆ. ಇಬ್ಬರು ಯುವತಿಯರ ಜೊತೆ ಸರಸದಲ್ಲಿದ್ದಾಗಲೇ ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಈ ಬಗ್ಗೆ ಸ್ವತಃ ಹೇಳಿಕೆ ನೀಡಿರುವ ಮಹಿಳೆ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಾನು ಪೊಲೀಸರ ತಂಡದೊಂದಿಗೆ ಹೋಟೆಲ್ ರೂಂ ಗೆ ತೆರಳಿದ್ದಾಗ ಪತಿ ಇಬ್ಬರು ಯುವತಿಯರ ಜೊತೆ ಸಿಕ್ಕಿ ಬಿದ್ದಿದ್ದಾನೆ. ನನ್ನ ಪತಿ ಒಂದುದಿನ ಮೊದಲು ತನ್ನ ವಿರುದ್ಧ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರೆ ಮಾಡಿ ಬೆದರಿಸಿದ್ದ. ಅನುಮಾನಗೊಂಡು ನೋಡಿದರೆ ಇಂತಹ ಕೆಲಸದಲ್ಲಿ ತೊಡಗಿದ್ದಾನೆ ಎಂದು ಕಿಡಿಕಾರಿದ್ದಾರೆ.
ಇನ್ನು ತನ್ನ ಪತಿ ತಾನು ಇಂಜಿನಿಯರ್ ಎಂದು ಹೇಳಿಕೊಂಡು ವಿವಾಹವಾಗಿದ್ದ. ಆದರೆ ಬೇರೆ ಕೆಲಸ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಪೊಲೀಸರೊಂದಿಗೆ ಹೋಟೆಲ್ ರೂಂ ಗೆ ಎಂಟ್ರಿಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿರುವ ಅನುಮಾನವೂ ವ್ಯಕ್ತವಾಗಿದ್ದು, ಸದ್ಯ ಸಿಕ್ಕಿಬಿದ್ದಿರುವ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
https://twitter.com/otvnews/status/1823735507572154506?ref_src=twsrc%5Etfw%7Ctwcamp%5Etweetembed%7Ctwterm%5E1823735507572154506%7Ctwgr%5E3cd117384b7ca2c5a7982cc81680e752d0425cfb%7Ctwcon%5Es1_&ref_url=https%3A%2F%2Fjanaspandhan.com%2Fvideo-husband-with-two-young-women-in-hotel-wife-caught-red-handed%2F