ಗೋವಾದಲ್ಲಿ ‘ಹನಿಮೂನ್’ ಎಂದೇಳಿ ಅಯೋಧ್ಯೆಗೆ ಕರೆದೊಯ್ದ ಗಂಡ , ಡೈವೋರ್ಸ್ ಕೇಳಿದ ಹೆಂಡ್ತಿ

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಹನಿಮೂನ್ ಹೋಗುವ ವಿಚಾರಕ್ಕೆ ನಡೆದ ಜಗಳ ಡೈವೋರ್ಸ್ ವರೆಗೂ ಹೋಗಿದೆ. ಗೋವಾದಲ್ಲಿ ಹನಿಮೂನ್ ಮಾಡಿಕೊಳ್ಳೋಣ ಎಂದು ಗಂಡ ಹೆಂಡತಿಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದು, ಹೆಂಡತಿ ಡೈವೋರ್ಸ್ ಕೇಳಿದ್ದಾಳೆ.

ಮಧುಚಂದ್ರಕ್ಕೆ ಗೋವಾಕ್ಕೆ ಕರೆದೊಯ್ಯುವ ಭರವಸೆಯನ್ನು ಈಡೇರಿಸಲು ವಿಫಲವಾದ ನಂತರ ಮಹಿಳೆಯೊಬ್ಬಳು ಪತಿಯಿಂದ ವಿಚ್ಛೇದನ ಪಡೆಯಲು ಪ್ರಯತ್ನಿಸಿದ್ದಾಳೆ. ಪತಿ ತನ್ನನ್ನು ಅಯೋಧ್ಯೆ ಮತ್ತು ವಾರಣಾಸಿಗೆ ಕರೆದೊಯ್ದಿದ್ದಾನೆ ಎಂದು ಹೇಳಿಕೊಂಡ ಮಹಿಳೆ, ಪ್ರವಾಸದಿಂದ ಹಿಂದಿರುಗಿದ ಹತ್ತು ದಿನಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

ಮಹಿಳೆ ತನ್ನ ವಿಚ್ಛೇದನ ಅರ್ಜಿಯಲ್ಲಿ ‘ತಾನು ಮತ್ತು ತನ್ನ ಪತಿ ಇಬ್ಬರೂ ಉದ್ಯೋಗದಲ್ಲಿದ್ದೇವೆ ಮತ್ತು ಉತ್ತಮ ಸಂಬಳವನ್ನು ಪಡೆಯುತ್ತೇವೆ . ಅವರು ( ನನ್ನ ಗಂಡ) ವಿದೇಶಕ್ಕೆ ಹನಿಮೂನ್ ಗೆ ಹೋಗುತ್ತೇವೆ ಎಂದು ಪೋಷಕರ ಬಳಿ ಕೂಡ ಹೇಳಿದ್ದರು. ಆದರೆ ಪೋಷಕರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದರು’ ಎಂದು ಪತ್ನಿ ಉಲ್ಲೇಖಿಸಿದ್ದಾರೆ. ತನ್ನ ಪತಿ ತನಗಿಂತ ತನ್ನ ಕುಟುಂಬಕ್ಕೆ ಆದ್ಯತೆ ನೀಡುತ್ತಾನೆ ಎಂದು ಅವಳು ಹೇಳಿಕೊಂಡಿದ್ದಾಳೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿಯರ ನಡುವೆ ಜಗಳ ನಡೆಸಿದ್ದು, ಕೊನೆಗೆ ಗಂಡ ಗೋವಾಗೆ ಹನಿಮೂನ್ ಹೋಗೋಣ ಎಂದು ಹೆಂಡತಿಯನ್ನು ಸಮಾಧಾನಪಡಿಸಿದ್ದಾನೆ.

ಐದು ತಿಂಗಳ ಹಿಂದೆ ವಿವಾಹವಾದ ದಂಪತಿಗಳು ಗೋವಾ ಮತ್ತು ದಕ್ಷಿಣ ಭಾರತದ ಪ್ರವಾಸಕ್ಕೆ ಪರಸ್ಪರ ಒಪ್ಪಿಕೊಂಡರು. ಆದರೆ, ನಿಗದಿತ ಪ್ರವಾಸಕ್ಕೆ ಒಂದು ದಿನ ಮೊದಲು, ಪತಿ ತನ್ನ ಹೆಂಡತಿಗೆ ಅಯೋಧ್ಯೆ ಮತ್ತು ವಾರಣಾಸಿಗೆ ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಪತಿ ಒತ್ತಾಯಕ್ಕೆ ವಾರಣಾಸಿ, ಅಯೋಧ್ಯೆಗೆ ಹೋಗಿ ಬಂದ ಮಹಿಳೆ ಮನೆಗೆ ಬಂದ ನಂತರ ಡೈವೋರ್ಸ್ ಬೇಕೆಂದು ಕೇಳಿದ್ದಾಳೆ.  ಈ ಹಿನ್ನೆಲೆ ದಂಪತಿಗೆ ಕೌನ್ಸೆಲಿಂಗ್‌ ನಡೆಸಲಾಗುತ್ತಿದೆ ಎಂದು ವಕೀಲ ಶೈಲ್ ಅವಸ್ತಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read