ಮೈಸೂರು: ಕೌಟುಂಬಿಕ ಕಲಹ ಪತಿಯ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆ ಬಳಿ ಈ ಘಟನೆ ನಡೆದಿದೆ.
ದರೋಡೆ ನಾಟಕವಾಡಿ ಪತಿ ಹತ್ಯೆಗೆ ಸ್ಕೆಚ್ ಹಾಕಿ ಪತಿಯನ್ನೇ ಕೊಲೆಗೈದಿದ್ದಾಳೆ ಪತ್ನಿ. ರಾಜೇಂದ್ರ ಕೊಲೆಯಾದ ವ್ಯಕ್ತಿ. ಸಂಗೀತಾ ಪತಿಯನ್ನೆ ಕೊಲೆಗದ ಪತ್ನಿ. ಸದ್ಯ ಸಂಗೀತಾ ಹಾಗೂ ಗ್ಯಾಂಗ್ ನ್ನು ಬಂಧಿಸಲಾಗಿದ್ದು, ಮಾಡಿದ ತಪ್ಪನ್ನು ಆಕೆ ಒಪ್ಪಿಕೊಂಡಿದ್ದಾಳೆ.
ಹುಂಡುವಿನಹಳ್ಳಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ರಾಜೇಂದ್ರ ಹಾಗೂ ಸಂಗೀತಾಳನ್ನು ಕಾರಿನಲ್ಲಿ ಬಂದ ಗ್ಯಾಂಗ್ ಅಡ್ಡಗಟ್ಟಿತ್ತು. ಈ ವೇಳೆ ಕಾರಿನಿಂದ ಇಳಿದುಬಂದ ವ್ಯಕ್ತಿಯೊಬ್ಬ ರಾಜೇಂದ್ರ ಜೊತೆ ಜಗಳ ಮಾಡಿದ್ದಾನೆ. ಸಂಗೀತಾ ಕತ್ತಿನಲ್ಲಿದ್ದ ಚೈನ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಹರಿತವಾದ ಆಯುಧದಿಂದ ರಾಜೇಂದ್ರನಿಗೆ ತಿವಿದಿದ್ದಾನೆ. ಇದೇ ವೇಳೆ ಮತ್ತೊಂದು ವಾಹನ ಬಂದಿದ್ದರಿಂದ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ರಾಜೇಂದ್ರದನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸವನ್ನಪ್ಪಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಇದು ಕೊಲೆ ಎಂಬುದು ಗೊತ್ತಾಗಿದೆ. ಆರೋಪಿಗಳನ್ನು ಹಿಡಿದು ವಿಚಾರಿಸಿದಾಗ ಪತ್ನಿ ಸಂಗೀತಾಳೆ ದರೋಡೆ ನೆಪದಲ್ಲಿ ಪತಿ ಕೊಲೆ ಮಾಡಿಸಿದ್ದು ಬಯಲಾಗಿದೆ. ತನ್ನ ಸಹೋದರ ಸಂಜಯ್ ನನ್ನು ಬಳಸಿಕೊಂಡು ಪತಿಯ ಕೊಲೆ ಮಾಡಿದ್ದ. ಈ ಕೃತ್ಯದಲ್ಲಿ ಓರ್ವ ಅಪ್ರಾಪ್ತ ಕೂಡ ಭಾಗಿಯಾಗಿದ್ದಾನೆ. ಸದ್ಯ ಸಂಗೀತಾ, ಸಂಜಯ್, ಇನ್ನೋರ್ವ ಆರೋಪಿ ಕೃತ್ಯಕ್ಕೆ ಬಳಿಸಿದ್ದ ಬಾಡಿಗೆ ಕಾರನ್ನು ವಶಕ್ಕೆ ಪಡೆಯಲಾಗಿದೆ.
