ನಿಧಿ ಆಸೆಗಾಗಿ ಹೆತ್ತ ಮಗುವನ್ನೆ ಹತ್ಯೆ ಮಾಡಲು ಯತ್ನಿಸಿದ್ದ ತಂದೆಯ ಮತ್ತೊಂದು ಕರಾಳ ಮುಖ ಬಯಲು

ಬೆಂಗಳೂರು: ನಿಧಿ ಆಸೆಗಾಗಿ ಹೆತ್ತ ಮಗುವನ್ನೇ ಹತ್ಯೆ ಮಾಡಲು ಯತ್ನಿಸಿದ್ದ ಸದ್ಧಾಂ ಹುಸೇನ್ ನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಪತಿಯೇ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸದ್ಧಾಂ ಹುಸೇನ್ ನ ಸಾಲು ಸಾಲು ಅಪರಾಧಗಳು ಬೆಳಕಿಗೆ ಬಂದಿವೆ.

ಸದ್ದಾಂ ಹುಸೇನ್ ತಾನು ಹಿಂದೂ ಎಂದು ಹೇಳಿ ನಂಬಿಸಿ ಹಿಂದೂ ಯುವತಿಯನ್ನು ವಿವಾಹವಾಗಿ ಬಳಿಕ ಪತ್ನಿಯನ್ನು ಮತಾಂತರ ಮಾಡಿದ್ದ. ಪತಿ ಸದ್ದಾಂ ನೀಡುತ್ತಿದ್ದ ಕಿರುಕುಳದ ಬಗ್ಗೆ ಹಿಂಸೆ ಬಗ್ಗೆ ಸ್ವತ: ಪತ್ನಿ ವನಜಾಕ್ಷಿ ಅಲಿಯಾಸ್ ಸಾದಿಯಾ ದೂರು ದಾಖಲಿಸಿದ್ದಾರೆ.

2020ರಲ್ಲಿ ಬ್ಲೂಡಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಸದ್ದಾಂ ಹುಸೇನ್, ಈಶ್ವರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ಬಳಿಕ ತನ್ನನ್ನು ಮದುವೆಯಾಗುವಂತೆ ಕೇಳಿದ್ದ. ಹಿಂದೂ ಹುಡುಗನೆಂದು ಭಾವಿಸಿ ವನಜಾಕ್ಷಿ ಈಶ್ವರ್ ನನ್ನು ಮದುವೆಯಾಗಿದ್ದಳಂತೆ. ಹಿಂದೂ ಸಂಪ್ರದಾಯದಂತೆ ಇಬ್ಬರೂ ವಿವಾಹವಾಗಿದ್ದರಂತೆ. ಕೆಲ ದಿನಗಳ ಬಳಿಕ ಈಶ್ವರ್ ತನ್ನ ಹೆಸರು ಸದ್ದಾಂ ಹುಸೇನ್, ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಬೇಕು ಎಂದು ಒತ್ತಾಯಿಸತೊಡಗಿದ್ದ.

ಅಜ್ಞಾತ ಸ್ಥಳಕ್ಕೆ ವನಜಾಕ್ಷಿಯನ್ನು ಕರೆದೊಯ್ದಿದ್ದ ಸದ್ದಾಂ ಹುಸೇನ್, ಆತನ ಸಹಚರರಾದ ನಯಾಜ್ ಹಾಗೂ ಇತರರ ಸಮ್ಮುಖದಲ್ಲಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿ ಸಾದಿಯಾ ಎಂದು ಹೆಸರನ್ನು ಬದಲಿಸಿದ್ದ. ಮುಸ್ಲಿಂ ಸಂಬಂಧಿತ ಕೆಲ ಪ್ರಮಾಣ ಪತ್ರಕ್ಕೂ ಸಹಿ ಹಾಕುವಂತೆ ಒತ್ತಾಯಿಸಿದ್ದ ಎಂದು ಸದಿಯಾ ಅಲಿಯಾಸ್ ವನಜಾಕ್ಷಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗರ್ಭವತಿಯಾದ ಬಳಿಕ ಸದ್ದಾಂ ನಿರಂತರ ಕಿರುಕುಳ ನೀಡುತ್ತಿದ್ದ. ಹಲ್ಲೆ ಮಾಡುತ್ತಿದ್ದ. ನನ್ನ ತಾಯಿಗೆ ಜೀವ ಬೆದರಿಕೆ ಹಾಕಿದ್ದ. 2021ರ ಜುಲೈನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದೆ. ಮಗನಿಗೆ ಕರಣ್ ರಾಜ್ ಎಂದು ನಾಮಕರಣ ಮಾಡಿದ್ದೆ. ಪತಿ ಸದ್ದಾಂ ಹುಸೇನ್ ನಿಧಿ ಆಸೆಗಾಗಿ ಕುಟ್ಟಿ ಪೂಜೆ ಎಂಬ ಮಾಟಮಂತ್ರ ಮಾಡಲು ಶುರುಮಾಡಿದ್ದ. ಮಾಟಮಂತ್ರಕ್ಕೆ ಮಗುವನ್ನು ಬಲಿಕೊಡುವುದಾಗಿ ಹೇಳಿದ್ದ. ಕೇರಳದವರ ಜೊತೆಗೂಡಿ ಮಾಟಮಂತ್ರ ಮಾಟಮಂತ್ರ ಮಾಡಿಸಿ ಕಿರುಕುಳ ನಿಡುತ್ತಿದ್ದ. ಈ ಹಿಂದೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಪೊಲೀಸರು ಸದ್ದಾಂ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದರು.

ಅ.13ರಂದು ತುಮಕೂರಿನ ಮನೆ ಬಳಿ ಮಗನನ್ನು ಅಪಹರಿಸಲು ಯತ್ನಿಸಿದ್ದ. ಈ ವೇಳೆ ನಾನು ಹಾಗೂ ಮಗ ತಪ್ಪಿಸಿಕೊಂಡು ಪಾರಾಗಿದ್ದೇವೆ. ನಿಧಿ ಆಸೆಗೆ ಮಾಟಮಂತ್ರ ಮಾಡಿ ಮಗನನ್ನೇ ಬಲಿಕೊಡಲು ಸದ್ದಾಂ ಹುಸೇನ್ ಯತ್ನಿಸಿದ್ದಾನೆ ಎಂದು ಸದ್ದಾಂ ಪತ್ನಿ ಸಾದಿಯಾ ಅಲಿಯಾಸ್ ವನಜಾಕ್ಷಿ ಕಮಿಷ್ನರ್ ಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read