ತನ್ನ ಪತ್ನಿ ವಿವಾಹವನ್ನು ಆಕೆಯ ಪ್ರಿಯಕರನೊಂದಿಗೆ ನೆರವೇರಿಸಿದ ಪತಿ: ಯಾವ ಸಿನಿಮಾಗೂ ಕಡಿಮೆಯಿಲ್ಲ ಈ ಸ್ಟೋರಿ…!

ಸಿನಿಮೀಯ ರೀತಿಯ ಲವ್​ ಸ್ಟೋರಿಯ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಸಾಮಾನ್ಯ ಗ್ರಾಮವೊಂದರಲ್ಲಿ ಸಂಭವಿಸಿದೆ.

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಾನೇ ಮುಂದೆ ನಿಂತು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿಕೊಟ್ಟಿದ್ದಾನೆ. ಮದುವೆಗೂ ಮುಂಚೆ ಮಹಿಳೆಯನ್ನು ಪ್ರೀತಿಸುತ್ತಿದ್ದ ಪ್ರಿಯಕರ ಆಕೆಯನ್ನು ನೋಡಲು ಆಕೆಯ ಗಂಡನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಆಕೆಯ ಅತ್ತೆ – ಮಾವ, ಇಬ್ಬರನ್ನೂ ರೆಡ್​ ಹ್ಯಾಂಡ್​ ಆಗಿ ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.

ಡಿಯೋರಿಯಾದ ಬರಿಯಾರ್​​ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಬಿಹಾರದ ಗೋಪಾಲ್​ಗಂಜ್​ ಜಿಲ್ಲೆಯ ಭೋರೆ ಗ್ರಾಮದ ಯುವತಿಯೊಂದಿಗೆ ಡಿಯೋರಿಯಾ ಜಿಲ್ಲೆಯ ವ್ಯಕ್ತಿಯು ವಿವಾಹವಾಗಿದ್ದರು. ಶುಕ್ರವಾರ ರಾತ್ರಿ ವೇಳೆಗೆ ಇಬ್ಬರ ಮದುವೆ ನಡೆದಿತ್ತು. ಆದರೆ ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆಯೇ ವಧುವಿನ ಮಾಜಿ ಪ್ರಿಯಕರ ಆಕೆಯ ಪತಿಯ ಮನೆಗೆ ಆಗಮಿಸಿದ್ದಾನೆ. ಆಕೆಯ ಮನೆಯೊಳಗೆ ನುಸುಳಿದವನನ್ನು ಮನೆಯವರು ಪತ್ತೆ ಮಾಡಿದ್ದಾರೆ.

ವಧುವಿನ ಮಾಜಿ ಪ್ರಿಯಕರನಿಗೆ ಗ್ರಾಮಸ್ಥರು ಥಳಿಸಿದ್ದಾರೆ. ಈ ವೇಳೆ ವರ ಆತನ ಮೇಲೆ ಕರುಣೆ ತೋರಿಸಿ ಯಾರೂ ಥಳಿಸಬೇಡಿ ಅಂತಾ ಮನವಿ ಮಾಡಿದ್ದಾರೆ.

ಅಲ್ಲದೇ ಅವರಿಬ್ಬರು ಪ್ರೇಮಿಗಳು ಎಂಬುದನ್ನು ಅವರಿಬ್ಬರಿಂದಲೇ ವರ ತಿಳಿದುಕೊಂಡಿದ್ದಾರೆ. ಇಬ್ಬರೂ ಪ್ರೇಮಿಗಳು ಎಂದು ತಿಳಿದ ಬಳಿಕ ಎರಡೂ ಮನೆಯವರು ಹಾಗೂ ಗ್ರಾಮಸ್ಥರನ್ನು ಒಪ್ಪಿಸಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಬಳಿಕ ನೂತನ ವಧುವರರನ್ನು ಅವರ ಊರಿಗೆ ಕಳುಹಿಸಿಕೊಡುವ ಮೂಲಕ ಸಿನಿಮೀಯ ರೀತಿಯಲ್ಲಿ ಪ್ರೇಮ ಕತೆಯೊಂದು ಒಳ್ಳೆಯ ರೀತಿಯಲ್ಲಿ ಕೊನೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read