ಒತ್ತಡದಿಂದ ಬಳಲುತ್ತಿರುವವರಿಗೆ ಒಳ್ಳೆ ಮದ್ದು ಅಪ್ಪುಗೆ

ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಅದ್ರಲ್ಲಿ ಅಪ್ಪುಗೆ ಕೂಡ ಒಂದು. ವ್ಯಕ್ತಿ ದುಃಖದಲ್ಲಿದ್ದಾಗ, ಖುಷಿಯಲ್ಲಿದ್ದಾಗ ಅಥವಾ ಯಾವುದೋ ಸಮಸ್ಯೆಯಲ್ಲಿದ್ದಾಗ ಆಪ್ತರು ಅಪ್ಪಿಕೊಂಡ್ರೆ ಆತನಿಗೆ ಸಿಗುವ ಖುಷಿಯನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.

ಅಪ್ಪುಗೆಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಅಪ್ಪುಗೆ  ಆರೋಗ್ಯಕ್ಕೆ ಒಳ್ಳೆಯದು ಎಂಬುದು ಕೂಡ ಸಂಶೋಧನೆಯಿಂದ ಬಹಿರಂಗವಾಗಿದೆ.

ಖಿನ್ನತೆ, ಒಂಟಿತನ, ಒತ್ತಡದಿಂದ ಬಳಲುತ್ತಿರುವವರಿಗೆ ಅಪ್ಪುಗೆ ಒಳ್ಳೆ ಮದ್ದಿನ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಮೀಕ್ಷೆ ಪ್ರಕಾರ ಡೀಪ್ ಹಗ್ ನಿಮ್ಮ ದೇಹದ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ಅಪ್ಪುಗೆ ವೇಳೆ ಸಿಗುವ ಪ್ರೀತಿ, ನಿಕಟತೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಆಪ್ತರನ್ನು ಅಪ್ಪಿಕೊಂಡ್ರೆ ನೋವು ಕಡಿಮೆಯಾಗುತ್ತದೆಯಂತೆ. ಅಪ್ಪುಗೆಯೊಂದೆ ಅಲ್ಲ ಕೈ ಹಿಡಿದುಕೊಂಡ್ರೂ ಮನಸ್ಸಿಗಾದ ನೋವು ಶಮನವಾಗುತ್ತದೆಯಂತೆ.

ಅಪ್ಪುಗೆ ಹೃದಯಕ್ಕೆ ಒಳ್ಳೆಯದು. ಹೃದಯದ ಆರೋಗ್ಯ ಕಾಪಾಡುವ ಕೆಲಸವನ್ನು ಅಪ್ಪುಗೆ ಮಾಡುತ್ತದೆ. ಹಗ್ ಮಾಡುವುದ್ರಿಂದ ರಕ್ತ ಸಂಚಾರ ವೇಗ ಪಡೆಯುವುದ್ರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

ಅಪ್ಪುಗೆಯಿಂದ ದಾಂಪತ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ನಂಬಿಕೆ ಪ್ರಬಲವಾಗುತ್ತದೆ. ವಿಶ್ವಾಸ ಹಾಗೂ ಭದ್ರತೆ ಭಾವ ಮನಸ್ಸಿನಲ್ಲಿ ಮೂಡುತ್ತದೆ.

ಅಪ್ಪುಗೆಯಿಂದ ಸಂಗಾತಿಯ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತದೆ. ಶರೀರ ಒತ್ತಡ ಮುಕ್ತವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read