HSRP ಅಳವಡಿಸದವರಿಗೆ ಗುಡ್ ನ್ಯೂಸ್: ಗಡುವು ವಿಸ್ತರಣೆಗೆ ಹೈಕೋರ್ಟ್ ಅನುಮತಿ

ಬೆಂಗಳೂರು: ಅತಿ ಸುರಕ್ಷಿತ ನೋಂದಣಿ ಫಲಕ(HSRP) ಅಳವಡಿಕೆ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮ ಹಾಗೂ ನಿರ್ಧಾರವನ್ನು ಜುಲೈ 4ರ ವರೆಗೆ ಜರುಗಿಸಬಾರದು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ, HSRP ಅಳವಡಿಕೆಗೆ ನಿಗದಿಪಡಿಸಿ ಗಡುವು ವಿಸ್ತರಣೆಗೆ ಅನುಮತಿ ಕೂಡ ನೀಡಲಾಗಿದೆ.

HSRP ಅಳವಡಿಕೆಗೆ ವಿಧಿಸಲಾದ ಗಡುವು ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿ.ಎನ್.ಡಿ. ಎನರ್ಜಿ ಲಿಮಿಟೆಡ್ ಮೊದಲಾದವರು ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದಿದ್ದು, ಸರ್ಕಾರಕ್ಕೆ ಈ ಕುರಿತಾಗಿ ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಂ ಹುಯಿಲಗೋಳ ಅವರು, HSRP ಅಳವಡಿಕೆಗೆ ಸರ್ಕಾರ ಮೇ 31ರ ಗಡುವು ವಿಧಿಸಿತ್ತು. ಜೂನ್ 12ರ ವರೆಗೆ ಬಲವಂತದ ಕ್ರಮ ಅಥವಾ ಯಾವುದೇ ನಿರ್ಧಾರ ಕೈಗೊಳ್ಳದಂತೆ ಮೇ 21ರಂದು ಹೈಕೋರ್ಟ್ ರಜಾ ಕಾಲದ ಪೀಠ ಸೂಚಿಸಿತ್ತು. ಆಗಸ್ಟ್ ಅಥವಾ ಸೆಪ್ಟೆಂಬರ್ ವರೆಗೆ ಗಡುವು ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ನ್ಯಾಯಪೀಠ ಅನುಮತಿ ನೀಡಿದಲ್ಲಿ ಗಡುವು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. ಗಡುವು ವಿಸ್ತರಿಸಲು ಹೈಕೋರ್ಟ್ ಅನುಮತಿ ನೀಡಿದ್ದು, ಜುಲೈ 4ರ ವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read