ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ ಫೋಟೋಗೆ ಈ ಪ್ರತಿಕ್ರಿಯೆ ನೀಡಿದ್ದಾರೆ ಮಾಜಿ ಪತ್ನಿ

ನಟ ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ ತನ್ನ ಇನ್‌ಸ್ಟಾ ಗ್ರಾಂನಲ್ಲಿ ಫೋಟೋವೊಂದನ್ನ ಹಾಕಿದ್ದು ಇದಕ್ಕೆ ಹೃತಿಕ್ ರೋಷನ್ ಮಾಜಿ ಪತ್ನಿ ಪ್ರತಿಕ್ರಿಯಿಸಿದ್ದಾರೆ.

ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸೀಕ್ವಿನ್ ಸೀರೆಯಲ್ಲಿ ಸಬಾ ಆಜಾದ್ ತುಂಬಾ ಸುಂದರವಾಗಿ ಕಾಣುತ್ತಿದ್ದು ಅದನ್ನ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ಲೈಕ್ ಮಾಡಿದ್ದಾರೆ.

ಸಬಾ ಆಜಾದ್ ಮತ್ತು ಹೃತಿಕ್ ರೋಷನ್ ಪ್ರಸ್ತುತ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಪೋಸ್ಟ್ ಅನ್ನು ಹಂಚಿಕೊಂಡಿರುವ ಸಬಾ ಫೋಟೋಗೆ “ಶೈನಿ ಡಿಸ್ಕೋ ಡಿಸ್ಕೋ ಡಿಸ್ಕೋ……” ಎಂದು ಶೀರ್ಷಿಕೆ ನೀಡಿದ್ದಾರೆ.

ಸಬಾ ಆಜಾದ್ ಅವರ ಪೋಸ್ಟ್ ಗೆ ಸುಸ್ಸಾನ್ನೆ ಖಾನ್ ಪ್ರತಿಕ್ರಿಯಿಸಿದ್ದು ಇದೇ ಮೊದಲಲ್ಲ. ಆಗಾಗ್ಗೆ ಅವರ ಇನ್ ಸ್ಟಾಗ್ರಾಂ ಫೋಟೋಗಳಿಗೆ ಸುಸಾನೆ ಖಾನ್ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ ಸುಸಾನೆ ಖಾನ್, ಗೆಳೆಯ ಅರ್ಸ್ಲಾನ್ ಗೋನಿ, ಮಾಜಿ ಪತಿ ಹೃತಿಕ್ ರೋಷನ್ ಮತ್ತು ಮಕ್ಕಳಾದ ರೆಹಾನ್ ಮತ್ತು ಹೃದಾನ್ ಅವರೊಂದಿಗೆ ಸಬಾ ಅವರ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದರು.

ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಡೇಟಿಂಗ್ ಮಾಡುತ್ತಿದ್ದಾರೆ. ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದಂದು ಅವರು ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದ್ದರು. ಈ ಹಿಂದೆ ನಟ ಹೃತಿಕ್ ಇಂಟೀರಿಯರ್ ಡಿಸೈನರ್ ಸುಸಾನೆ ಖಾನ್ ಅವರನ್ನು ವಿವಾಹವಾಗಿದ್ದರು. ಆದರೆ ಅವರು 2014 ರಲ್ಲಿ ವಿಚ್ಛೇದನ ಪಡೆದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read