ಗಳಿಕೆಯಲ್ಲಿ ಹಿಂದೆ ಬಿದ್ದಿದೆ ಹೃತಿಕ್‌ – ದೀಪಿಕಾರ ʼಫೈಟರ್ʼ ಚಿತ್ರ; ಸುಸ್ತಾಗಿಸುವಂತಿದೆ ಸಿನೆಮಾದ ಕಲೆಕ್ಷನ್‌…!

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಚಿತ್ರ ʼಫೈಟರ್ʼ ಜನವರಿ 25 ರಂದೇ ಬಿಡುಗಡೆಯಾಗಿತ್ತು. ಸಿನಿಮಾ ಸೂಪರ್‌ ಹಿಟ್‌ ಆಗಬಹುದು ಎಂಬ ನಿರೀಕ್ಷೆಯಲ್ಲಿತ್ತು ಚಿತ್ರತಂಡ. ಅಭಿಮಾನಿಗಳು ಕೂಡ ಫೈಟರ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಫೈಟರ್‌ ಗಳಿಕೆ ವಿಚಾರದಲ್ಲಿ ಹಿಂದೆ ಬಿದ್ದಿದೆ.

ಬಿಡುಗಡೆಯಾಗಿ 8 ದಿನಗಳು ಕಳೆದರೂ ಚಿತ್ರದ ಬಜೆಟ್‌ ವಾಪಸ್‌ ಬಂದಿಲ್ಲ. ಆದರೂ ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣ್ತಾ ಇದೆ. ಸಿನೆಮಾ ನಿರ್ಮಾಣಕ್ಕೆ ವ್ಯಯಿಸಿದ ಹಣಕ್ಕಿಂತ ಹೆಚ್ಚು ಕಲೆಕ್ಷನ್‌ ಮಾಡಿದಾಗ ಮಾತ್ರ ಅದನ್ನು ಹಿಟ್‌ ಎಂದು ಪರಿಗಣಿಸಲಾಗುತ್ತದೆ. ಹೃತಿಕ್-ದೀಪಿಕಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಬಹುದು ಅನ್ನೋ ನಿರೀಕ್ಷೆಯಿತ್ತು. ಪಠಾಣ್ ಚಿತ್ರ ಭರ್ಜರಿ ಹಿಟ್‌ ಆದ ಬೆನ್ನಲ್ಲೇ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮೇಲೆ ಕೂಡ ಸಾಕಷ್ಟು ನಿರೀಕ್ಷೆಗಳಿದ್ದವು.

ಗಣರಾಜ್ಯೋತ್ಸವದಂದು ಫೈಟರ್‌ ರಿಲೀಸ್‌ ಆಗಿದೆ. ಸಿದ್ದಾರ್ಥ್‌ ಆನಂದ್‌ರ ಪಠಾಣ್ ಚಿತ್ರ ಕೂಡ ಅದೇ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು, 1000 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಮೂಲಗಳ ಪ್ರಕಾರ ಫೈಟರ್‌ ಚಿತ್ರ 7ನೇ ದಿನ 6.5 ಕೋಟಿ ರೂಪಾಯಿ ಗಳಿಸಿದೆ. ಆದರೆ ಎಂಟನೇ ದಿನದ ಕಲೆಕ್ಷನ್‌ ಕೇವಲ 4.35 ಕೋಟಿ ರೂಪಾಯಿ. ಎಂಟು ದಿನಗಳಲ್ಲಿ ಫೈಟರ್ ಚಿತ್ರ ಭಾರತದಲ್ಲಿ 144.85 ಕೋಟಿ ಗಳಿಸಿದೆ. ಫೈಟರ್ ಚಿತ್ರದ ಬಜೆಟ್ 250 ಕೋಟಿ ರೂಪಾಯಿ.

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read