ಪಿತೃ ಪಕ್ಷದಲ್ಲಿ ದೇವರ ‘ಪೂಜೆ’ ಹೇಗೆ ಮಾಡಬೇಕು….?

ಪಿತೃ ಪಕ್ಷ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಮಹತ್ವದ ಸ್ಥಾನವಿದೆ. ಪಿತೃ ಪಕ್ಷದಲ್ಲಿ ಶ್ರಾದ್ಧಕ್ಕೆ ವಿಶೇಷ ಮಹತ್ವವಿದೆ. ಈ 15 ದಿನಗಳ ಕಾಲ ಪೂರ್ವಜರನ್ನು ಗೌರವದಿಂದ ಸ್ಮರಿಸಲಾಗುತ್ತದೆ. ಧಾರ್ಮಿಕ ನಂಬಿಕೆ ಮತ್ತು ಪೌರಾಣಿಕ ಗ್ರಂಥಗಳ ಪ್ರಕಾರ, ಪಿತೃ ಪಕ್ಷದಲ್ಲಿ ಎಲ್ಲಾ ರೀತಿಯ ಮಂಗಳಕರ ಮತ್ತು ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಪಿತೃ ಪಕ್ಷದಲ್ಲಿ ದೇವಾನುದೇವತೆಗಳನ್ನು ಪೂಜಿಸಬೇಕೋ ಬೇಡವೋ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ.

ಪಿತೃಪಕ್ಷದ ಸಮಯದಲ್ಲಿ ಪೂರ್ವಜರು ಭೂಮಿಯ ಮೇಲೆ ಬರ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಈ ಸಂದರ್ಭದಲ್ಲಿ ಪೂರ್ವಜರನ್ನು ಪೂಜಿಸಲು ಹೆಚ್ಚು ಆದ್ಯತೆ ನೀಡಲಾಗುತ್ತದೆ. ಹಾಗಂತ ದೇವಾನುದೇವತೆಗಳನ್ನು ಪೂಜೆ ಮಾಡುವುದನ್ನು ಬಿಡಬೇಕು ಎಂದಲ್ಲ. ಶಾಸ್ತ್ರಗಳ ಪ್ರಕಾರ, ಪಿತೃ ಪಕ್ಷದಲ್ಲಿ ಎಂದಿನಂತೆ ದೇವರ ಪೂಜೆಯನ್ನು ಮಾಡಬೇಕು. ಪೂರ್ವಜರು ದೇವರಿಗಿಂತ ಹೆಚ್ಚಲ್ಲ. ಹಾಗಾಗಿ ಪೂರ್ವಜರ ಪೂಜೆ ನಡೆಯುತ್ತಿದ್ದರೂ, ದೇವರ ಪೂಜೆಯನ್ನು ಮರೆಯಬಾರದು.

ಶ್ರಾದ್ಧ ಅಥವಾ ಪೂರ್ವಜರ ಪೂಜೆ ಮಾಡುವ ಮೊದಲು ದೇವರನ್ನು ಪೂಜೆ ಮಾಡಬೇಕು. ಇಲ್ಲವೆಂದ್ರೆ ಫಲ ಪ್ರಾಪ್ತಿಯಾಗುವುದಿಲ್ಲ. ಹಾಗೆಯೇ ದೇವರ ಮನೆಯಲ್ಲಿ ದೇವರ ಫೋಟೋ ಜೊತೆ ಪೂರ್ವಜರ ಫೋಟೋ ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಪೂರ್ವಜರ ಒಂದು ಫೋಟೋ ಮಾತ್ರ ಇರಬೇಕು. ಪೂರ್ವಜರ ನಾಲ್ಕೈದು ಫೋಟೋಗಳನ್ನು ಇಡುವುದು ಒಳ್ಳೆಯದಲ್ಲ. ಪೂರ್ವಜರ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿಟ್ಟು ಪೂಜೆ ಮಾಡಿದ್ರೆ ಪಿತೃ ದೋಷ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read