ಅಡುಗೆ ಮಾಡೋಕೆ ಹರಿತವಾದ ಚಾಕು ಇದ್ರೆ ಕೆಲಸ ಎಷ್ಟು ಸುಲಭ ಅಲ್ವಾ ? ಆದ್ರೆ ಚಾಕು ಮೊನಚು ಕಳೆದುಕೊಂಡ್ರೆ ಕತ್ತರಿಸೋದು ದೊಡ್ಡ ತಲೆನೋವು. ತರಕಾರಿ ಸರಿಗ್ ಕಟ್ ಆಗಲ್ಲ, ಅಡುಗೆ ಮಾಡೋಕೆ ಬೇಜಾರು ಬರುತ್ತೆ. ಆದ್ರೆ ಇನ್ಮೇಲೆ ಚಿಂತೆ ಮಾಡಬೇಡಿ. ನಿಮ್ಮ ಮನೆಯಲ್ಲೇ ಇರೋ ಕೆಲವು ವಸ್ತುಗಳನ್ನು ಬಳಸಿ ನಿಮ್ಮ ಚಾಕುವನ್ನು ಮತ್ತೆ ಹೊಸತರಹ ಹರಿತ ಮಾಡಬಹುದು ! ಶಾರ್ಪ್ನರ್ ಇಲ್ಲದಿದ್ರೂ ಪರವಾಗಿಲ್ಲ.
ಮೊನಚಿಲ್ಲದ ಚಾಕು ಅಂತ ಕಂಡುಹಿಡಿಯೋದು ಹೇಗೆ ? ತರಕಾರಿ ಕತ್ತರಿಸೋಕೆ ಜಾಸ್ತಿ ಬಲ ಹಾಕಬೇಕಾದ್ರೆ, ಹಣ್ಣು ತರಕಾರಿ ಸರಿಯಾಗಿ ಕಟ್ ಆಗ್ದಿದ್ರೆ, ಚಾಕು ಜಾರುತ್ತಿದ್ರೆ, ಬ್ಲೇಡ್ ಮೊಂಡಾಗಿದ್ರೆ ನಿಮ್ಮ ಚಾಕುಗೆ ಶಾರ್ಪ್ನಿಂಗ್ ಬೇಕು ಅಂತ ಅರ್ಥ.
ಹಾಗಾದ್ರೆ ಶಾರ್ಪ್ನರ್ ಇಲ್ಲದೆ ಚಾಕು ಹರಿತ ಮಾಡೋದು ಹೇಗೆ ಅಂತೀರಾ? ಇಲ್ಲಿದೆ ಸಿಂಪಲ್ ಟಿಪ್ಸ್:
- ಸೆರಾಮಿಕ್ ಮಗ್: ಮಗ್ ಅನ್ನು ಉಲ್ಟಾ ಮಾಡಿ ಅದರ ಕೆಳಗಿನ ಒರಟಾದ ಭಾಗಕ್ಕೆ ಚಾಕುವಿನ ಬ್ಲೇಡ್ ಅನ್ನು ನಿಧಾನವಾಗಿ ಉಜ್ಜಿ. ಇದು ಶಾರ್ಪ್ನಿಂಗ್ ಸ್ಟೋನ್ ತರ ಕೆಲಸ ಮಾಡುತ್ತೆ.
- ನಯವಾದ ಕಲ್ಲು: ನಯವಾದ ಕಲ್ಲನ್ನು ಚೆನ್ನಾಗಿ ತೊಳೆದು ಅದರ ಮೇಲೆ ಚಾಕುವಿನ ಬ್ಲೇಡ್ ಅನ್ನು ಉಜ್ಜಿ. ಕಲ್ಲು ಸ್ವಲ್ಪ ತೇವವಾಗಿದ್ರೆ ಘರ್ಷಣೆ ಕಡಿಮೆ ಆಗುತ್ತೆ.
- ಇನ್ನೊಂದು ಚಾಕು: ಎರಡು ಚಾಕುಗಳನ್ನು ತೆಗೆದುಕೊಂಡು ಒಂದರ ಬ್ಲೇಡ್ ಅನ್ನು ಇನ್ನೊಂದರ ಬೆನ್ನಿಗೆ ಉಜ್ಜಿ. ಇದು ಅಷ್ಟು ಪರ್ಫೆಕ್ಟ್ ಶಾರ್ಪ್ನೆಸ್ ಕೊಡದೇ ಇದ್ರೂ ತುರ್ತು ಪರಿಸ್ಥಿತಿಗೆ ಬೆಸ್ಟ್.
- ಉಗುರು ಫೈಲರ್: ಉಗುರು ಫೈಲರ್ ಕೂಡಾ ಚಾಕು ಹರಿತಗೊಳಿಸೋಕೆ ಸಹಾಯ ಮಾಡುತ್ತೆ. ಫೈಲರ್ ಅನ್ನು ಸಮತಟ್ಟಾದ ಜಾಗದಲ್ಲಿ ಇಟ್ಟು ಚಾಕುವಿನ ಬ್ಲೇಡ್ ಅನ್ನು ನಿಧಾನವಾಗಿ ಉಜ್ಜಿ. ಆಮೇಲೆ ಚಾಕುವನ್ನು ಚೆನ್ನಾಗಿ ತೊಳೆಯಿರಿ.
ಹೀಗೆ ನಿಮ್ಮ ಮನೆಯಲ್ಲಿರೋ ಈ ವಸ್ತುಗಳನ್ನು ಬಳಸಿ ನಿಮ್ಮ ಚಾಕುವನ್ನು ಮತ್ತೆ ಹರಿತಗೊಳಿಸಬಹುದು. ಇನ್ಮೇಲೆ ಕತ್ತರಿಸೋಕೆ ಕಷ್ಟ ಅನ್ಸಿದ್ರೆ ಟೆನ್ಷನ್ ತಗೋಬೇಡಿ, ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ !