ದೆಹಲಿ ಗಣರಾಜ್ಯೋತ್ಸವದ ಪರೇಡ್ ವೀಕ್ಷಣೆಗೆ ಎಲ್ಲಿ ಸಿಗುತ್ತೆ ಟಿಕೆಟ್ ? ಇಲ್ಲಿದೆ ಸಂಪೂರ್ಣ ವಿವರ

ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ತಯಾರಿ ನಡೆದಿದೆ. ದೆಹಲಿಯ ಕರ್ತವ್ಯ ಪಥ್‌ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುವುದು. ಈ ಬಾರಿ ದೇಶ 75 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ದೇಶದ ಯಾವುದೇ ನಾಗರಿಕರು ಗಣರಾಜ್ಯೋತ್ಸವ ಪರೇಡ್ ನೋಡಲು ಬರಬಹುದು. ನೀವು ಈ ಕ್ಷಣವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಬಯಸಿದ್ದರೆ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಬಹುದು.

ಗಣರಾಜ್ಯೊತ್ಸವ ಕಾರ್ಯಕ್ರಮದ ಟಿಕೆಟ್‌ ಖರೀದಿಗೆ ನೀವು   ಯಾವುದೇ ಅಂಚೆ ಕಚೇರಿ ಅಥವಾ ಸರ್ಕಾರಿ ಕಚೇರಿಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್‌ ನಲ್ಲಿ ನೀವು ಟಿಕೆಟ್‌ ಬುಕ್‌ ಮಾಡಬಹುದಾಗಿದೆ. ರಕ್ಷಣಾ ಸಚಿವಾಲಯದ ವೆಬ್‌ಸೈಟ್ aamantran.mod.gov.in ಗೆ ಭೇಟಿ ನೀಡುವ ಮೂಲಕ  ಪರೇಡ್ ವೀಕ್ಷಣೆ ಟಿಕೆಟ್‌ ಖರೀದಿಸಬೇಕು. ಈ ವೆಬ್‌ ಸೈಟ್‌ ನಲ್ಲಿಯೇ ಗಣ್ಯರು ಮತ್ತು ಅತಿಥಿಗಳಿಗೆ ಆನ್‌ಲೈನ್ ಪಾಸ್‌ ಸೌಲಭ್ಯ ಕೂಡ ಲಭ್ಯವಿದೆ.

ಗಣರಾಜ್ಯೋತ್ಸವಕ್ಕೆ ಮೂರು ರೀತಿಯ ಟಿಕೆಟನ್ನು ಸರ್ಕಾರ ನೀಡುತ್ತದೆ.  ಮೊದಲ ಟಿಕೆಟ್ ಬೆಲೆ 500 ರೂಪಾಯಿ. ಇದು ವಿವಿಐಪಿ ಆಸನದ ಹಿಂದಿನಿಂದ ಪ್ರಾರಂಭವಾಗುತ್ತದೆ.  ನೀವು ಹತ್ತಿರದಿಂದ ಕಾರ್ಯಕ್ರಮ ವೀಕ್ಷಿಸಬಹುದು. ಎರಡನೇ ಟಿಕೆಟ್ ದರ 100 ರೂಪಾಯಿ. ಮೂರನೇ ಟಿಕೆಟ್ ದರ 20 ರೂಪಾಯಿ. ನೀವು ಪರೇಡ್ ವೀಕ್ಷಣೆಗೆ ಟಿಕೆಟ್‌ ಇಲ್ಲದೆ ಹೋಗಲು ಸಾಧ್ಯವಿಲ್ಲ. ಟಿಕೆಟ್‌ ಜೊತೆ  ಸರ್ಕಾರಿ ಐಡಿ ನಿಮ್ಮ ಬಳಿ ಇರಬೇಕು.

ನೀವು ಮೊದಲು www.aamantran.mod.gov.in ಗೆ ಹೋಗಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮೇಲ್ ಐಡಿಯನ್ನು ನಮೂದಿಸಬೇಕು. ನಂತ್ರ ಒಟಿಪಿ ಪರಿಶೀಲನೆ ಮಾಡಬೇಕು. ಇದಾದ್ಮೇಲೆ ಪ್ರೋಗ್ರಾಂಗೆ ಟಿಕೆಟ್ ಕಾಯ್ದಿರಿಸಿ ಎಂಬ ಆಯ್ಕೆ ಆರಿಸಿ ಅಲ್ಲಿ ಆನ್ಲೈನ್‌ ಟಿಕೆಟ್‌ ಬುಕ್‌ ಮಾಡಬೇಕು. ಜನವರಿ 10 ರಿಂದ ಟಿಕೆಟ್‌ ವಿತರಣೆ ಶುರುವಾಗಿದ್ದು ಜನವರಿ 25 ರವರೆಗೆ ಟಿಕೆಟ್‌ ಪಡೆಯಲು ಅವಕಾಶವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read