ಸದಾ ಖುಷಿ ಖುಷಿಯಾಗಿರುವುದು ಹೇಗೆ….?

ಸದಾ ಸಂತೋಷದಿಂದ ಇರುವವರನ್ನು ಕಂಡಾಗ ನಿಮ್ಮ ಹೊಟ್ಟೆ ಉರಿಯುತ್ತದೆಯೇ. ನೀವು ಇತರರ ಹೊಟ್ಟೆ ಉರಿಸಬಹುದು. ಹೇಗೆಂದಿರಾ, ಸಂತೋಷದಿಂದ ಇರುವ ಕೆಲವು ಟಿಪ್ಸ್ ಗಳು ನಿಮಗಾಗಿ ಇಲ್ಲಿವೆ…

ನಿಮ್ಮ ಆತ್ಮೀಯರನ್ನು ಪ್ರೀತಿಸಿ. ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಿ. ಜೊತೆಯಾಗಿ ಕಳೆದ ಸಂದರ್ಭಗಳನ್ನು ಹಂಚಿಕೊಳ್ಳಿ. ಇನ್ನೊಬ್ಬರ ಕೆಲಸದಲ್ಲಿ ನೆರವಾಗಿ, ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಿ.

ಇನ್ನೊಬ್ಬರ ಮೇಲೆ ನಂಬಿಕೆಯಿಡಿ. ಸಂಶಯದಿಂದ ಯಾವ ಸಂಬಂಧವೂ ಗಟ್ಟಿಯಾಗದು. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿಲ್ಲ ಎಂದಾಕ್ಷಣ ನಿರಾಶರಾಗದಿರಿ. ಪುನಃ ಪ್ರಯತ್ನ ಮಾಡಿ ನೋಡಿ. ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯದಿರಿ.

ಜೀವನಕ್ಕೊಂದು ಉದ್ದೇಶವಿರಲಿ. ಇಲ್ಲವಾದರೆ ಯಾವುದೂ ನಿಮಗೆ ಆಕರ್ಷಕ ಎನಿಸದು. ಎಲ್ಲದರಲ್ಲೂ ತಪ್ಪು ಕಂಡೀತು. ಕಿರಿಕಿರಿ ಎನಿಸೀತು. ಅದರ ಬದಲು ಎಲ್ಲದರಲ್ಲೂ ಖುಷಿ ಕಾಣಿ. ಸಂತೋಷವಾಗಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read