ಶಾಲೆಯಿಂದ ಪಾಸೌಟ್ ಆದ 16 ವರ್ಷಗಳ ಬಳಿಕ ಮೆಚ್ಚಿನ ಶಿಕ್ಷಕಿಯೊಂದಿಗೆ ಮದುವೆಯಾದ ಮಹಿಳೆ….!

ನಮ್ಮಲ್ಲಿ ಬಹುತೇಕರಿಗೆ ನಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರ ಮೇಲೆ ಕ್ರಶ್ ಆಗಿರುತ್ತದೆ. ಟೀನೇಜ್ ದಿನಗಳಲ್ಲಿ ಶಿಕ್ಷಕರ ಮೇಲೆ ಹೀಗೆ ಆಗುವುದು ಸಹಜ. ಆ ಮುಗ್ಧ ವಯಸ್ಸಿನಲ್ಲಿ ಹೀಗೆ ಆಗುವುದನ್ನು ವರ್ಷಗಳ ಬಳಿಕ ನೆನೆಸಿಕೊಂಡು ನಗುವುದೂ ಸಾಮಾನ್ಯ. ಆದರೆ ಕೆಲವರಿಗೆ ಶಾಲಾ ದಿನಗಳಲ್ಲಿ ಆದ ಕ್ರಶ್ ಬಹಳ ದೀರ್ಘಾವಧಿಗೆ ಉಳಿಯುತ್ತದೆ.

ಮಾಜಿ ವಿದ್ಯಾರ್ಥಿನಿಯೊಬ್ಬರು ತಮ್ಮ ಶಿಕ್ಷಕಿಯ ಮೇಲಿನ ಕ್ರಶ್‌ ಅನ್ನು ಆಕೆಯನ್ನು ಮದುವೆಯಾಗುವವರೆಗೂ ಕೊಂಡೊಯ್ದಿದ್ದಾರೆ.

ಅಮೆರಿಕದ ಮಿಷಿಗನ್ ನಿವಾಸಿ ಮೋನಿಕಾ ಕೆಚಮ್ 31, ಶಾಲೆ ಬಿಟ್ಟು 16 ವರ್ಷಗಳು ಕಳೆದ ಬಳಿಕವೂ ತಮ್ಮ ಕ್ರಶ್‌ ಶಿಕ್ಷಕಿ ಮೈಕೆಲ್ಲೆ ಫೋಸ್ಟರ್‌ 56, ಅವರನ್ನು ಫೇಸ್ಬುಕ್‌ನಲ್ಲಿ ಬಹಳ ವರ್ಷದ ಬಳಿಕ ಭೇಟಿಯಾಗಿದ್ದಾರೆ. 2004ರಲ್ಲಿ ಕೆಚಮ್‌ಗೆ 13 ವರ್ಷ ವಯಸ್ಸಾಗಿದ್ದ ವೇಳೆ, ಆಕೆ ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು.

“ಮೈಕೆಲ್ಲಿ ನನಗೆ ಏಳನೇ ತರಗತಿಯಲ್ಲಿ ಶಿಕ್ಷಕಿಯಾಗಿದ್ದರು ಹಾಗೂ ಅವರು ನನ್ನ ಮೆಚ್ಚಿನ ಶಿ‌ಕ್ಷಕಿಯಾಗಿದ್ದರು,” ಎನ್ನುವ ಮೋನಿಕಾ ಸದ್ಯದ ಫೋರ್ಕ್‌ಲಿಫ್ಟ್ ಚಾಲಕಿ ಹಾಗೂ ಕಂಟೆಂಟ್ ಸೃಷ್ಟಿಕರ್ತೆಯಾಗಿದ್ದಾರೆ.

ಲೆಸ್ಬಿಯನ್ (ಸಲಿಂಗಿ) ಆಗಿರುವ ಮೈಕೆಲ್ಲಿಗೆ ತಮ್ಮ ಮೆಚ್ಚಿನ ವಿದ್ಯಾರ್ಥಿನಿಯ ಸಂದೇಶವೊಂದು ಫೇಸ್ಬುಕ್‌ನಲ್ಲಿ ಬಂದಿದೆ. ಆಗಸ್ಟ್‌ 2021ರಲ್ಲಿ ಆಕೆಯನ್ನು ಭೋಜನದ ವೇಳೆ ಭೇಟಿಯಾದ ಮೈಕೆಲ್ಲಿ ಹಾಗೂ ಮೋನಿಕಾ ಬಹಳ ಬೇಗ ಒಳ್ಳೆಯ ಸ್ನೇಹಿತರಾದರು. ಇವರ ಈ ಸ್ನೇಹ ಬರುಬರುತ್ತಾ ರೊಮ್ಯಾಂಟಿಕ್ ಆಗಿ ಬದಲಾಗಿದ್ದು, 2022ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತಂತಮ್ಮ ಹಿಂದಿನ ಸಂಬಂಧಗಳನ್ನು ಕಡಿದುಕೊಂಡ ಇಬ್ಬರೂ, ಈಗ ಜೊತೆಯಾಗಿ ವಾಸಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read