ಕ್ಯಾಪ್ಸುಲ್‌ಗಳ ಕವರ್‌ ಪ್ಲಾಸ್ಟಿಕ್ ಇರಬಹುದಾ ? ಇದು ದೇಹಕ್ಕೆ ಎಷ್ಟು ಹಾನಿಕಾರಕ ? ಇಲ್ಲಿದೆ ಎಲ್ಲ ಅನುಮಾನಗಳಿಗೆ ಉತ್ತರ

ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ವೈದ್ಯರ ಬಳಿ ಹೋಗುತ್ತೇವೆ. ವೈದ್ಯರು ನೀಡಿದ ತರಹೇವಾರಿ ಟ್ಯಾಬ್ಲೆಟ್‌ಗಳನ್ನು ಸೇವಿಸುವುದು ಸಾಮಾನ್ಯ. ಕೆಲವೊಂದು ಕ್ಯಾಪ್ಸೂಲ್‌ಗಳನ್ನು ನೋಡಿದಾಗ ಅವುಗಳ ಕವರ್‌ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಈ ಕವರ್‌ಗಳಿಂದ ಏನಾದರೂ ತೊಂದರೆಯಾಗಬಹುದು ಎನಿಸುವುದು ಸಹಜ.

ಆದರೆ ಈ ಕ್ಯಾಪ್ಸುಲ್ ಕವರ್, ಪ್ಲಾಸ್ಟಿಕ್‌ನಿಂದ ತಯಾರಾಗಿಲ್ಲ. ಇದಕ್ಕಾಗಿ ಜೆಲಾಟಿನ್ ಅಥವಾ HPMC ಯಂತಹ ಸುರಕ್ಷಿತ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ವಸ್ತುಗಳು ನಮ್ಮ ದೇಹಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ ಮತ್ತು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.

ಕ್ಯಾಪ್ಸುಲ್ಗಳು ಯಾವುದೇ ಆಕಾರ ಮತ್ತು ಬಣ್ಣದ್ದಾಗಿರಬಹುದು. ಕೆಲವು ತುಂಬಾ ಚಿಕ್ಕವು, ಕೆಲವು ದೊಡ್ಡವು ಇರುತ್ತವೆ. ಪ್ರತಿ ಕ್ಯಾಪ್ಸುಲ್ ಒಳಗೆ ಔಷಧವನ್ನು ತುಂಬಿಸಲಾಗುತ್ತದೆ. ಈ ಕ್ಯಾಪ್ಸುಲ್‌ಗಳಲ್ಲಿನ ಔಷಧವು ಘನ ರೂಪದಲ್ಲಿ, ಪುಡಿ ಅಥವಾ ದ್ರವವಾಗಿರಬಹುದು. ಆದರೆ ಔಷಧ ಏನೇ ಇರಲಿ, ಅದರ ಮೇಲೆ ತೆಳುವಾದ ಹೊದಿಕೆ ಅಥವಾ ಲೇಪನ ಇರುತ್ತದೆ.

ಕ್ಯಾಪ್ಸುಲ್‌ ಕವರ್ ತಯಾರಿಕೆಯಲ್ಲಿ ಯಾವ ವಸ್ತುವನ್ನು ಬಳಸಲಾಗುತ್ತದೆ ಎಂದು ಜನರಿಗೆ ತಿಳಿದಿಲ್ಲ. ಇದಕ್ಕೆ ಪ್ಲಾಸ್ಟಿಕ್ ಬಳಸುವುದಿಲ್ಲ. ಬದಲಿಗೆ ಜೆಲಾಟಿನ್ ಅನ್ನು HPMC ಯಂತಹ ಸುರಕ್ಷಿತ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಈ ಕವರ್ ಬಾಹ್ಯ ಪರಿಸರ ಮತ್ತು ಹೊಟ್ಟೆಯ ಆಮ್ಲದಿಂದ ಕ್ಯಾಪ್ಸುಲ್‌ನ ನಿಜವಾದ ಅಂಶಗಳನ್ನು ರಕ್ಷಿಸುತ್ತದೆ ಮತ್ತು ದೇಹದಲ್ಲಿ ಸುಲಭವಾಗಿ ಕರಗುವಂತೆ ಮಾಡುತ್ತದೆ. ಈ ಪದಾರ್ಥಗಳು ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.

ಕ್ಯಾಪ್ಸುಲ್‌ ಕವರ್‌ ತಯಾರಾಗುವುದು ಹೇಗೆ ?

ಕ್ಯಾಪ್ಸುಲ್‌ ಕವರ್‌ಗೆ ಬಳಸಲಾಗುವ ಜೆಲಾಟಿನ್ ಅನ್ನು ಮುಖ್ಯವಾಗಿ ಪ್ರಾಣಿಗಳ ಮೂಳೆಗಳು ಮತ್ತು ಅಂಗಗಳಿಂದ ಪಡೆಯಲಾಗುತ್ತದೆ. ಅದನ್ನು ನಿರ್ದಿಷ್ಟ ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ಕೆಲವು ಕ್ಯಾಪ್ಸುಲ್‌ಗಳ ಕವರ್ ಅನ್ನು ಸೆಲ್ಯುಲೋಸ್‌ನಿಂದ ಕೂಡ  ತಯಾರಿಸಲಾಗುತ್ತದೆ. ಸಸ್ಯಾಹಾರಿಗಳು ಇವುಗಳನ್ನು ನಿರ್ಭಯವಾಗಿ ಸೇವಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read