ಮಕ್ಕಳ ಫೇವರಿಟ್‌ ಟೊಮೆಟೊ ಕೆಚಪ್ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ? ಇಲ್ಲಿದೆ ಡಿಟೇಲ್ಸ್‌

ಟೊಮೆಟೋ ಕೆಚಪ್ ಮಕ್ಕಳ ಫೇವರಿಟ್‌. ಸಾಮಾನ್ಯವಾಗಿ ಚಪಾತಿಯಿಂದ ಹಿಡಿದು ಅನೇಕ ತಿನಿಸುಗಳ ಜೊತೆಗೆ ಮಕ್ಕಳು ಕೆಚಪ್‌ ಸವಿಯುತ್ತಾರೆ. ಫ್ರೆಂಚ್‌ ಫ್ರೈಸ್‌ನಂತಹ ಜಂಕ್‌ ಫುಡ್‌ಗಳ ಜೊತೆಗಂತೂ ಇದು ಇರಲೇಬೇಕು. ಆದರೆ ಹೆಚ್ಚು ಕೆಚಪ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದರಲ್ಲಿ ಸೋಡಿಯಂ ಪ್ರಮಾಣ ಅತಿಯಾಗಿರುತ್ತದೆ.

ಅತಿಯಾಗಿ ಕೆಚಪ್ ತಿನ್ನುವುದು ನಮ್ಮ ಜೀರ್ಣಾಂಗ ವ್ಯವಸ್ಥೆಗೂ ಮಾರಕವಾಗಬಹುದು. ಇದು ಅನೇಕ ಗಂಭೀರ ಕಾಯಿಲೆಗಳಿಗೆ ಸಹ ಕಾರಣವಾಗುತ್ತದೆ. ಇದರಿಂದ ಸಂಧಿವಾತದಂತಹ ಸಮಸ್ಯೆ ಬರುವ ಸಾಧ್ಯತೆ ಇದೆ. ಮಕ್ಕಳು ಕೂಡ ಕೆಚಪ್‌ ಅನ್ನು ಅತಿಯಾಗಿ ತಿನ್ನಬಾರದು.

ಜಂಕ್ ಫುಡ್‌ಗಿಂತ ಸಾಮಾನ್ಯ ಆಹಾರದ ರುಚಿಯನ್ನು ಹೆಚ್ಚಿಸಲು ಕೆಚಪ್ ಬಳಸಲಾಗುತ್ತದೆ. ಕೆಚಪ್ ತಯಾರಿಕೆಯಲ್ಲಿ ಅನೇಕ ರೀತಿಯ ರಾಸಾಯನಿಕಗಳನ್ನು ಬೆರೆಸುತ್ತಾರೆ. ಇದರಿಂದಾಗಿ ಅದು ಕೆಡದಂತೆ ದೀರ್ಘಕಾಲ ಉಳಿಯುತ್ತದೆ.

ಕೆಚಪ್‌ ತಯಾರಿಸುವ ಸಂದರ್ಭದಲ್ಲಿ ಟೊಮೆಟೋದ ಸಿಪ್ಪೆಯನ್ನು ತೆಗೆದುಹಾಕಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಸಂರಕ್ಷಕಗಳನ್ನು ಬಳಸುವುದರಿಂದ ಮಕ್ಕಳಿಗೆ ಅದು ಸುರಕ್ಷಿತವಲ್ಲ.

ಮಾರುಕಟ್ಟೆಯಲ್ಲಿ ಸಿಗುವ ಕೆಚಪ್‌ನಲ್ಲಿ ಸೋಡಿಯಂ ಪ್ರಮಾಣ ವಿಪರೀತವಾಗಿರುತ್ತದೆ. ಅದನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅಧಿಕ ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು.

ಇನ್ನು ಟೊಮೆಟೋ ಕೆಚಪ್‌ನಲ್ಲಿ ಸಕ್ಕರೆಯ ಪ್ರಮಾಣವು ಕೂಡ ಜಾಸ್ತಿಯಿರುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಅತಿಯಾಗಿ ಸೇವಿಸುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬಿ.ಪಿ ಬರಬಹುದು.

ಹೆಚ್ಚು ಕೆಚಪ್ ತಿನ್ನುವುದರಿಂದ ಬೊಜ್ಜು ಬರುವ ಅಪಾಯವಿದೆ. ಇದರಲ್ಲಿರುವ ಸಕ್ಕರೆ ಮತ್ತು ಉಪ್ಪು ವೇಗವಾಗಿ ತೂಕವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೆಚ್ಚು ಕೆಚಪ್ ತಿನ್ನುವುದು ತ್ವರಿತ ಸ್ಥೂಲಕಾಯತೆಗೆ ಕಾರಣವಾಗುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read