ಯಾವುದೇ ಅಡ್ಡ ಪರಿಣಾಮ ಇಲ್ಲದ ʼಸ್ಟೀಮಿಂಗ್ʼ ಬಗ್ಗೆ ನಿಮಗೆಷ್ಟು ಗೊತ್ತು….?

ಸ್ಟೀಮಿಂಗ್ ಅಥವಾ ಮುಖಕ್ಕೆ ಬಿಸಿ ಹಬೆಯನ್ನು ತೆಗೆದುಕೊಳ್ಳುವ ಮೂಲಕವೂ ನಾವು ಮುಖದ ಹೊಳಪನ್ನು ಮರಳಿ ಪಡೆಯಬಹುದು. ಈ ಬಗ್ಗೆ ನಿಮಗೆಷ್ಟು ಗೊತ್ತು?

ಯಾವುದೇ ಅಡ್ಡ ಪರಿಣಾಮ ಇಲ್ಲದ ಈ ವಿಧಾನವನ್ನು ಅನುಸರಿಸುವುದು ಬಲು ಸುಲಭ. ಬಿಸಿನೀರಿಗೆ ಅಥವಾ ಆವಿಗೆ ನಮ್ಮ ಮುಖದ ರಂಧ್ರಗಳು ನಿಧಾನಕ್ಕೆ ತೆರೆದುಕೊಳ್ಳುತ್ತವೆ. ಈ ಮೂಲಕ ಮುಖದ ಕೊಳೆಯನ್ನು ನಿವಾರಿಸಬಹುದು.

ಕೆಲವು ನಿಮಿಷಗಳ ಕಾಲ ನಿಮ್ಮ ಮುಖವನ್ನು ಆವಿಗೆ ಒಡ್ಡಿಕೊಳ್ಳುವುದರಿಂದ ಮುಖದ ರಕ್ತನಾಳಗಳು ಹಿಗ್ಗಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತಾಗುತ್ತದೆ. ಇದರಿಂದ ಚರ್ಮದ ಮೇಲ್ಪದರಕ್ಕೆ ಆಮ್ಲಜನಕ ಪೂರೈಕೆ ಆಗುತ್ತದೆ.

ಇದು ನಿಮ್ಮನ್ನು ದೀರ್ಘ ಕಾಲದವರೆಗೆ ಯೌವ್ವನದಿಂದ ಇರುವಂತೆ ಮಾಡುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ ಆವಿ ತೆಗೆದುಕೊಳ್ಳುವುದಾದರೆ ನಿಮ್ಮ ತಲೆಯನ್ನು ಬಟ್ಟೆಯಿಂದ ಸುತ್ತಿಡಿ. ಕಿವಿಗಳಿಗೆ ಹತ್ತಿಯ ತುಂಡು ಇಟ್ಟುಕೊಳ್ಳಿ. ಆವಿ ತೆಗೆದುಕೊಳ್ಳುವಾಗ ಕಣ್ಣುಗಳನ್ನು ಮುಚ್ಚಿ.

ಆಧುನಿಕ ವಿಧಾನದಲ್ಲಿ ಪಾರ್ಲರ್ ಗಳಲ್ಲಿ ಸ್ಟೀಮರ್ ಮುಖಾಂತರವೂ ಇದನ್ನು ಮಾಡುತ್ತಾರೆ. ಮನೆಯಲ್ಲೇ ಮಾಡುವಾಗ ಏಳರಿಂದ ಎಂಟು ನಿಮಿಷಗಳ ಕಾಲ ಬಿಸಿ ತೆಗೆದುಕೊಂಡರೆ ಸಾಕು. ಅದಕ್ಕಿಂತ ಹೆಚ್ಚು ಹೊತ್ತು ಮೀಸಲಿಟ್ಟರೆ ಮುಖ ಡ್ರೈಯಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read