PAN‌ ಕಾರ್ಡ್ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಇಂಟ್ರಸ್ಟಿಂಗ್ ವಿವರ

ಶಾಶ್ವತ ಖಾತೆ ಸಂಖ್ಯೆ (ಪಾನ್‌) ಎಂದರೆ ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುವ ಹತ್ತು ಅಕ್ಷರಾಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಲ್ಯಾಮಿನೇಟ್ ಮಾಡಲಾದ ಈ ಪ್ಲಾಸ್ಟಿಕ್ ಕಾರ್ಡ್ ಬಹಳ ಮುಖ್ಯವಾದ ದಾಖಲೆ.

ಆದರೆ ಈ 10 ಅಕ್ಷರ ಮತ್ತು ಅಂಕಿಯಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಮಹತ್ವವಿದೆ ಎಂದು ಬಹುತೇಕರಿಗೆ ಅರಿವಿಲ್ಲ.

ಪಾನ್‌ ಎಂದರೆ ಸಾಮಾನ್ಯವಾಗಿ ನಿಮ್ಮ ಬಗೆಗಿನ ಮಾಹಿತಿ ವಿವರವಾಗಿದೆ. ಉದಾಹರಣೆಗೆ: “BFDPS8169K” ಎಂಬುದು ನಿಮ್ಮ ಪಾನ್ ಸಂಖ್ಯೆಯಾಗಿದ್ದರೆ, ಮೊದಲ ಮೂರು ಅಕ್ಷರಗಳಾದ BFD, ಆಂಗ್ಲ ವರ್ಣಮಾಲೆಯ A-Zವರೆಗಿನ ಅಕ್ಷರವಾಗಿರುತ್ತವೆ.

ಪಾನ್‌ನಲ್ಲಿರುವ ನಾಲ್ಕನೇ ಅಕ್ಷರವು, ಪಾನ್‌ ಹೊಂದಿರುವಾತನ ಸ್ಥಿತಿಯನ್ನು ತಿಳಿಸುತ್ತದೆ. P ಎಂದರೆ ವೈಯಕ್ತಿಕ ಎಂದರ್ಥ. ಅಂದರೆ ನೀವು ವೈಯಕ್ತಿಕ ಪಾನ್‌ದಾರರಾದರೆ ನಿಮ್ಮ ಪಾನ್‌ ಅಕ್ಷರಾಂಕದ ನಾಲ್ಕನೇ ಅಕ್ಷರವು P ಎಂದು ಇರುತ್ತದೆ. ಇದೇ ವೇಳೆ F & Cಗಳು ಸಂಸ್ಥೆಯನ್ನು ಸೂಚಿಸುತ್ತವೆ. H ಎಂದರೆ ಅವಿಭಜಿತ ಕುಟುಂಬದ ಸೂಚಕ. A ವ್ಯಕ್ತಿಗಳನ್ನು ಸೂಚಿಸಿದರೆ, T ಟ್ರಸ್ಟ್‌ನ ಸಂಕೇತ. B ಎಂದರೆ ವ್ಯಕ್ತಿಗಳ ಒಂದು ಗುಂಪು. L ಎಂದರೆ ಸ್ಥಳೀಯ ಪ್ರಾಧಿಕಾರ, G ಎಂದರೆ ಸರ್ಕಾರಕ್ಕೆ ಸಂಬಂಧಿಸಿದ್ದು.

ಐದನೇ ಅಕ್ಷರವು ಕಾರ್ಡ್‌ದಾರನ ಹೆಸರಿನ ಮೊದಲ ಅಕ್ಷರ ಸೂಚಿಸುತ್ತದೆ.

ಮುಂದಿನ ನಾಲ್ಕು ಅಂಕಿಗಳಲ್ಲಿ ಬರುವ ಸಂಖ್ಯೆಗಳು 0001ರಿಂದ 9999ರ ವರೆಗೂ ಚಾಲ್ತಿಯಲ್ಲಿರುವ ಸರಣಿ ಸಂಖ್ಯೆಗಳಾಗುತ್ತವೆ.

ಕೊನೆಯ ಅಕ್ಷರವು ಮೊದಲ ಒಂಬತ್ತು ಅಕ್ಷರಾಂಕಗಳನ್ನು ಗಣನೆಗೆ ತೆಗೆದುಕೊಂಡು ರಚಿಸಲಾದ ಅಕ್ಷರವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read