ಅಂಬಾನಿ ಮಗನ ಮದುವೆಯಲ್ಲಿ ‘ಡ್ಯಾನ್ಸ್’ ಮಾಡಲು ಈ ಬಾಲಿವುಡ್ ನಟರು ಪಡೆದ ಸಂಭಾವನೆ ಎಷ್ಟು?

ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಕ್ರಿಕೆಟ್ ತಾರೆಯರು, ನಟ ನಟಿಯರು ಸೇರಿದಂತೆ ಹಲವರು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಈ ವಿಡಿಯೋಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.

ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ನಾಟೂ ನಾಟೂ ಹಾಡು ಸೇರಿದಂತೆ ಹಲವು ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಅಂಬಾನಿ ಮಗನ ಮದುವೆಯಲ್ಲಿ ನೃತ್ಯ ಮಾಡಲು ಈ ಮೂವರು ನಟರು ಭಾರಿ ಹಣ ಪಡೆದಿದ್ದರು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಆದರೆ ಇದು ನಿಜ ಅಲ್ಲ… ವೇದಿಕೆಯ ಮೇಲೆ ಹೋಗಲು ಅವರಲ್ಲಿ ಯಾರೂ ಕೂಡ ಒಂದು ಪೈಸೆಯನ್ನೂ ಸಹ ಪಡೆದಿಲ್ಲವಂತೆ. ಜಾಂಬೋರಿಯಲ್ಲಿ ಆಹ್ವಾನಿತರೂ ಆಗಿರುವ ಗಣ್ಯರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. “ಮೂವರು ಖಾನ್ ಗಳನ್ನು ಒಟ್ಟಿಗೆ ವೇದಿಕೆಗೆ ಕರೆ ತರುವುದು ಪೂರ್ವನಿಯೋಜಿತ ನಿರ್ಧಾರವಾಗಿತ್ತು. ವೇದಿಕೆಯ ಮೇಲೆ ಹೋಗಲು ಅವರಲ್ಲಿ ಯಾರೂ ಒಂದು ಪೈಸೆಯನ್ನೂ ಪಡೆಯಲಿಲ್ಲ. ಅಂಬಾನಿಗಳ ಕುಟುಂಬದ ಪ್ರೀತಿಯ ಆತಿಥ್ಯಕ್ಕೆ, ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಹಣವನ್ನು ಕೇಳಿದರೆ ಅದು ಎಷ್ಟು ಸರಿ..? ಎಂದು ಬರೆದುಕೊಂಡಿದ್ದಾರೆ.

https://twitter.com/i/status/1764138015478423820

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read