ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ನಲ್ಲಿದ್ದು, ಇತ್ತೀಚೆಗೆ ನಡೆದ ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ಮೆರೆದಿದ್ದರು. ಇದೀಗ ಐಪಿಎಲ್ ಆರಂಭವಾಗುತ್ತಿದ್ದು, ಬ್ಯಾಟಿಂಗ್ ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
ಇದರ ಮಧ್ಯೆ ಶಾಲೆಗಳಲ್ಲಿ ಕ್ರೀಡೆಯನ್ನು ಒಂದು ವಿಷಯವಾಗಿ ಪರಿಗಣಿಸದೆ ಕಡೆಗಣಿಸುತ್ತಿರುವ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಲು ವಿರಾಟ್ ಕೊಹ್ಲಿ ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ಈ ಅಂಕ ಪಟ್ಟಿಯ ಪ್ರಕಾರ ವಿರಾಟ್ ಕೊಹ್ಲಿ 2004ರಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದು, ಗಣಿತದಲ್ಲಿ 41 (ಸಿ2), ಇಂಗ್ಲಿಷ್ ನಲ್ಲಿ 83 (ಎ1), ಹಿಂದಿಯಲ್ಲಿ 75 (ಬಿ1), ವಿಜ್ಞಾನದಲ್ಲಿ 55 (ಸಿ1) ಹಾಗೂ ಸಮಾಜದಲ್ಲಿ 61 (ಎ2) ಅಂಕ ಪಡೆದಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.