ಮಗುವಿನ ಬುದ್ಧಿವಂತಿಕೆಗೆ ʼತಾಯಿʼ ಕಾರಣ ಹೇಗೆ ಗೊತ್ತಾ….?

ವಿಶ್ವದಲ್ಲಿರುವ ಬುದ್ಧಿವಂತರೆಲ್ಲ ತಾಯಂದಿರಿಗೆ ಧನ್ಯವಾದ ಹೇಳಬೇಕು. ಯಾಕೆಂದ್ರೆ ಅವರ ತಾಯಿಯಿಂದ ಈ ಬುದ್ಧಿ ಸಿಕ್ಕಿದೆ. ತಂದೆಯಿಂದ ಅಲ್ಲ. ಸಂಶೋಧನೆಯೊಂದರ ಪ್ರಕಾರ ಮಗುವಿನ ಬುದ್ಧಿ ತಾಯಿಯಿಂದ ಅನುವಂಶೀಯವಾಗಿ ಬಂದಿದೆಯಂತೆ. ತಂದೆ ಇದ್ರಲ್ಲಿ ಏನು ಮಾಡಲೂ ಸಾಧ್ಯವಿಲ್ಲವೆಂದು ಸಂಶೋಧನೆ ಹೇಳಿದೆ.

ಸಂಶೋಧನೆ ಪ್ರಕಾರ ಮಕ್ಕಳ ಬುದ್ಧಿಮತ್ತೆ ಜೀನ್ ತಾಯಿಯಿಂದ ರವಾನೆಯಾಗುತ್ತದೆ. X ವರ್ಣತಂತು ಇದಕ್ಕೆ ಕಾರಣ. ಇದು ಮಹಿಳೆಯರಲ್ಲಿ ಎರಡಿದ್ದು, ಪುರುಷರಲ್ಲಿ ಒಂದಿರುತ್ತದೆ. ವಿಜ್ಞಾನಿಗಳ ಪ್ರಕಾರ ತಂದೆಯಿಂದ ಸಿಕ್ಕ ಜೀನ್ ನಿಷ್ಕ್ರಿಯವಾಗುತ್ತದೆ.  ಬುದ್ದಿಮತ್ತೆ ಜೀನ್ conditioned genesನಲ್ಲಿ ಒಂದಾಗಿದ್ದು, ಇದು ತಾಯಿಯಿಂದ ಬಂದಿರುತ್ತದೆ.

ಬುದ್ದಿವಂತ ಮಕ್ಕಳನ್ನು ಬಯಸುವ ಸಿಂಗಲ್ ತಾಯಂದಿರಿಗೆ ಇನ್ಮುಂದೆ ನೋಬೆಲ್ ಪ್ರಶಸ್ತಿ ಪಡೆದ ಪುರುಷರನ್ನು ವೀರ್ಯಕ್ಕಾಗಿ ಹುಡುಕಬೇಕಿಲ್ಲ. ಸ್ಥಳೀಯ ವೀರ್ಯ ಬ್ಯಾಂಕ್ ಗೆ ಹೋಗಿಯೂ ಮಗುವನ್ನು ಪಡೆಯಬಹುದು. ಮಗುವಿನ ಬಣ್ಣ, ಸೌಂದರ್ಯವೊಂದೇ ಅಲ್ಲ ಬುದ್ದಿವಂತಿಕೆಗೂ ತಾಯಿಯೇ ಜವಾಬ್ದಾರಳು.

ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ಮಾಡಿದ್ದಾರೆ. ತಾಯಿಯಿಂದ ಹೆಚ್ಚು ಜೀನ್ ಪಡೆದ ಇಲಿ ಮರಿ ಮೆದುಳು ಬೆಳೆದಿತ್ತು. ದೇಹ ಚಿಕ್ಕದಾಗಿತ್ತು. ತಂದೆಯಿಂದ ಹೆಚ್ಚಿನ ಜೀನ್ ಪಡೆದು ಹುಟ್ಟಿದ ಇಲಿಯ ದೇಹ ದೊಡ್ಡದಾಗಿತ್ತು. ಮೆದುಳು ಚಿಕ್ಕದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read