BREAKING : ‘ಕರ್ನಾಟಕ ಬಂದ್’ ಗೆ ಹೋಟೆಲ್ ಮಾಲೀಕರ ಸಂಘ ಬೆಂಬಲ : ನಾಳೆ ಊಟ-ತಿಂಡಿ ಏನೂ ಸಿಗಲ್ಲ

ಬೆಂಗಳೂರು : ನಾಳೆ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್’ ಗೆ ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿದ್ದು, ನಾಳೆ ಗ್ರಾಹಕರಿಗೆ ಹೋಟೆಲ್ ಊಟ, ತಿಂಡಿ ಸಿಗೋದು ಅನುಮಾನ ಎಂದು ಹೇಳಲಾಗಿದೆ.

ಕರ್ನಾಟಕ ಬಂದ್ ಸಂಬಂಧ ಹೋಟೆಲ್ ಅಸೋಸಿಯೇಷನ್ ಇಂದು ಸಭೆ ನಡೆಸಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಲು ನಿರ್ಧರಿಸಿದೆ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಮಾಹಿತಿ ನೀಡಿದ್ದು, ನಮ್ಮ ಸಂಘಟನೆ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಲಿದೆ. ಆದ್ದರಿಂದ ನಾಳೆ ಹೋಟೆಲ್ ತೆರೆಯದೇ ಇರಲು ನಿರ್ಧರಿಸಲಾಗಿದೆ ಎಂದರು.

ಕರುನಾಡಲ್ಲಿ ಕಾವೇರಿಗಾಗಿ ಹೋರಾಟ ಜೋರಾಗಿದ್ದು, ನಾಳಿನ ಕರ್ನಾಟಕ ಬಂದ್ ಗೆ ಹಲವು  ಸಂಘಟನೆಗಳು, ಅಸೋಸಿಯೇಷನ್ ಗಳು ಕೂಡ ಬೆಂಬಲ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರುಹರಿಬಿಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ನಾಳೆ ಅಖಂಡ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ಕರೆ ನೀಡಿದೆ.

ಕರ್ನಾಟಕ ಬಂದ್ ಗೆ    ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಹೌದು, ತುರ್ತು ಸೇವೆ ಹೊರತುಪಡಿಸಿ ಎಲ್ಲ ಸೇವೆಗಳೂ ಬಂದ್ ಮಾಡಲು ಬಸ್, ಲಾರಿ, ಟ್ಯಾಕ್ಸಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ಬೆಂಬಲ ಸೂಚಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read