ಅಮೆರಿಕದ ಪೋರ್ಟೊರಿಕೊ ಕಡಲತೀರದಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಉತ್ತರ ಕರಾವಳಿ ಪಟ್ಟಣವಾದ ಇಸಾಬೆಲಾದಲ್ಲಿ ಸೋಮವಾರ, ಮೇ 27 ರಂದು ನಡೆದ ಘಟನೆಯಲ್ಲಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದೆ ಎಂದು ಪೋರ್ಟೊ ರಿಕನ್ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಮಕ್ಕಳು 7, 10 ಮತ್ತು 12 ವರ್ಷ ವಯಸ್ಸಿನವರು ಎಂದು ವರದಿಯಾಗಿದೆ. ಅವರನ್ನು ಹತ್ತಿರದ ಪಟ್ಟಣವಾದ ಅಗುಡಿಲ್ಲಾದಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಅವರಲ್ಲಿ 12 ವರ್ಷದ ಮಗು ಗಂಭೀರ ಸ್ಥಿತಿಯಲ್ಲಿದೆ.
ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಿಂಚು ಬಡಿದ ತಕ್ಷಣ ಪ್ರಜ್ಞೆ ಕಳೆದುಕೊಂಡ ಮಕ್ಕಳು ಕಡಲ ತೀರದ ಮರಳಿನ ಮೇಲೆ ಬಿದ್ದಿವೆ. ಅವರನ್ನು ಎಚ್ಚರಿಸಲು ಇತರರು ಸತತ ಪ್ರಯತ್ನಿಸಿದ್ದಾರೆ. ಹಿರಿಯ ಮಗು ಘಟನೆಯಲ್ಲಿ ತನ್ನ ಕಾಲಿನ ಸ್ವಾದೀನ ಕಳೆದುಕೊಂಡಿರುವ ವರದಿಯಾಗಿದೆ. ವೈರಲ್ ವಿಡಿಯೋಗೆ ಮರುಗಿದ ನೆಟ್ಟಿಗರು ಮಕ್ಕಳು ಬೇಗನೆ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸಿದ್ದಾರೆ.
https://twitter.com/CollinRugg/status/1795584845479055490?ref_src=twsrc%5Etfw%7Ctwcamp%5Etweetembed%7Ctwterm%5E1795584845479055490%7Ctwgr%5Eece660f48254582f2379964b560f0b0ac09b723c%7Ctwcon%5Es1_&ref_url=