ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣದಲ್ಲಿ ನೀರು ತುಂಬಿದ್ದ ಬಕೆಟ್ ನಲ್ಲಿ ಬಿದ್ದು ಒಂದು ವರ್ಷದ ಮಗು ಮುಳುಗಿ ಸಾವನ್ನಪ್ಪಿದೆ.
ಚನ್ನಪಟ್ಟಣದ ಜೀವನಪುರ ಬಡಾವಣೆಯಲ್ಲಿ ಘಟನೆ ನಡೆದಿದೆ. ಸಂಶಾದ್ ಪಠಾಣ್ ಮತ್ತು ಮುಷ್ಕಾನ್ ದಂಪತಿಯ ಪುತ್ರಿ ಖುಷಿ ಮೃತಪಟ್ಟ ಮಗು. ದಂಪತಿ ಮಧ್ಯಾಹ್ನ ಮಲಗಿದ್ದ ವೇಳೆ ಮನೆ ಹಾಲ್ ಒರೆಸಲು ನೀರು ತುಂಬಿಟ್ಟಿದ್ದರು. ಆಟವಾಡಿಕೊಂಡಿದ್ದ ಮಗು ಬಕೆಟ್ ನಲ್ಲಿ ಮುಳುಗಿ ಮೃತಪಟ್ಟಿದೆ. ಮುಷ್ಕಾನ್ ಎದ್ದು ನೋಡಿದಾಗ ನೀರಿನ ಬಕೆಟ್ ನಲ್ಲಿ ಮಗು ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.