ಶಿವಮೊಗ್ಗದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಹಸೆಮಣೆ ಏರಬೇಕಾಗಿದ್ದ ಜೋಡಿ ದುರ್ಮರಣಕ್ಕೀಡಾಗಿದೆ.
ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ನಲ್ಲಿ ಒಮಿನಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಮೃತರನ್ನು ಶಿಕಾರಿಪುರ ತಾಲೂಕಿನ ಮಟ್ಟಿಕೋಟೆ ಗ್ರಾಮದ ರೇಖಾ (20) ಹಾಗೂ ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ (25) ಎಂದು ಗುರುತಿಸಲಾಗಿದೆ.ಆಗಸ್ಟ್ ನಲ್ಲಿ ರೇಖಾ ಹಾಗೂ ಬಸವನಗೌಡ ಎಂಗೇಜ್ ಮೆಂಟ್ ಆಗಿತ್ತು. ಡಿಸೆಂಬರ್ ತಿಂಗಳಿನಲ್ಲಿ ಇಬ್ಬರ ಮದುವೆ ಫಿಕ್ಸ್ ಆಗಿತ್ತು. ಆದರೆ ವಿಧಿ ಲಿಖಿತವೇ ಬೇರೆ ಆಗಿದೆ..