ಈ ರಾಶಿಯವರಿಗಿದೆ ಇಂದು ಸಾರ್ವಜನಿಕ ಜೀವನದಲ್ಲಿ ಮನ್ನಣೆ

ಮೇಷ : ಈ ದಿನ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ಇದು ಸಾರ್ವಜನಿಕ ಜೀವನದಲ್ಲಿ ನಿಮಗೆ ಮನ್ನಣೆ ತಂದುಕೊಡಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದರಿಂದ ನೆಮ್ಮದಿ ಎನಿಸಲಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಿ.

ವೃಷಭ : ನಿಮ್ಮ ತಾಳ್ಮೆಯಿಂದಾಗಿಯೇ ಇಡೀ ಕುಟುಂಬವು ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಿದೆ. ನಿಮ್ಮ ಮೇಲಿನ ಈ ಅಭಿಪ್ರಾಯಕ್ಕೆ ಭಂಗ ತರುವ ಕೆಲಸ ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಮೇಲಿನ ಗೌರವಕ್ಕೆ ಪೆಟ್ಟು ಬೀಳಬಹುದು.

ಮಿಥುನ : ನಾಲಗೆ ಮೇಲೆ ಹಿಡಿತವಿರಲಿ. ಇಲ್ಲವಾದಲ್ಲಿ ಆಪ್ತರನ್ನೇ ಕಳೆದುಕೊಳ್ಳುವಿರಿ. ಸಹೋದರನಿಗೆ ಆರ್ಥಿಕ ಸಹಾಯ ಮಾಡಲಿದ್ದೀರಿ. ಇದರಿಂದ ನಿಮ್ಮ ಪೋಷಕರು ಸಂತೋಷಗೊಳ್ಳುವರು. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ.

ಕಟಕ : ಮೆಕ್ಯಾನಿಕಲ್​ ಇಂಜಿನಿಯರ್​ಗಳಿಗೆ ಇದು ಶುಭ ದಿನವಾಗಿದೆ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯಲಿದ್ದೀರಿ. ಸಂಗಾತಿಯೊಂದಿಗೆ ತಪ್ಪು ಕಲ್ಪನೆಯಿಂದಾಗಿ ಜಗಳ ಮಾಡಿಕೊಳ್ಳುವಿರಿ . ಕಂಕಣ ಭಾಗ್ಯವಿದೆ. ಅರೆಮನಸ್ಸಿನಿಂದ ಯಾವುದೇ ಕೆಲಸಕ್ಕೆ ಕೈ ಹಾಕಬೇಡಿ.

ಸಿಂಹ : ಇಂದು ನಿಮಗೆ ಅಂದುಕೊಂಡ ಕಾರ್ಯಗಳು ನೆರವೇರುವುದರಿಂದ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆದರೆ ಚಿಂತೆ ಬೇಡ. ಮನೆಮದ್ದೇ ಸಾಕಾಗುತ್ತದೆ. ಉದ್ಯಮದಲ್ಲಿ ಮೂರ್ಖತನದಿಂದಾಗಿ ನಷ್ಟ ಉಂಟಾಗಬಹುದು.

ಕನ್ಯಾ : ನಿಮಗೆ ಇಂದು ವ್ಯವಹಾರದಲ್ಲಿ ಲಾಭವಿದೆ. ಕಚೇರಿ ಕೆಲಸಗಳಲ್ಲಿ ಸಹೋದ್ಯೋಗಿಯ ನೆರವಿನಿಂದ ಉನ್ನತ ಮಟ್ಟಕ್ಕೆ ಏರಲಿದ್ದೀರಿ. ಸರ್ಕಾರಿ ಶಿಕ್ಷಕರಿಗೆ ಇಂದು ಕೆಲಸದಲ್ಲಿ ಒತ್ತಡವಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇದೆ.

ತುಲಾ : ಯಾವುದೇ ಮಾತುಗಳನ್ನು ಆಡುವ ಮುನ್ನ ಯೋಚನೆ ಮಾಡಿ. ಜನರು ತಪ್ಪಾಗಿ ಅರ್ಥೈಸಿಕೊಂಡು ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಲೌಕಿಕ ಜೀವನದತ್ತ ಒಲವು ತೋರುವಿರಿ. ತಾಯಿಯ ಜೊತೆ ಕಿರಿಕಿರಿ ಉಂಟಾಗಲಿದೆ.

ವೃಶ್ಚಿಕ : ಸರಿಯಾದ ಸಮಯಕ್ಕೆ ಸಾಲ ತೀರಿಸಲು ಸಾಧ್ಯವಾಗದೇ ತಳಮಳಗೊಳ್ಳುವಿರಿ. ಮಾನಸಿಕ ಖಿನ್ನತೆ ಕೂಡ ಉಂಟಾಗಬಹುದು. ಸಂಗಾತಿ ನೀಡುವ ಕೆಲ ಸೂಕ್ತ ಸಲಹೆಗಳನ್ನು ಕೇಳಿಸಿಕೊಳ್ಳಿ. ಇದರಿಂದ ಏನಾದರೂ ಮಾರ್ಗ ಸಿಗಬಹುದು.

ಧನು : ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯಗಳು ಕೈಗೂಡಲಿದೆ. ಇಂದು ನೀವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಹಣಕಾಸಿನ ನೆರವು ಸಿಗಲಿದೆ. ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗಬಹುದು.

ಮಕರ : ಕಚೇರಿ ಕೆಲಸದಲ್ಲಿ ವಿಶ್ರಾಂತಿ ಪಡೆಯದೇ ದುಡಿಯುತ್ತಿದ್ದೀರಿ. ಇದು ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಸಂಗಾತಿಯ ಅತಿಯಾದ ಕೋಪ ನಿಮ್ಮ ಅಸಮಾಧಾನಕ್ಕೆ ಕಾರಣವಾಗಲಿದೆ.

ಕುಂಭ : ಮಕ್ಕಳು ಓದಿನಲ್ಲಿ ಹಿಂದೇಟು ಹಾಕಲಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣ ಎನಿಸಲಿದೆ. ನಿಮ್ಮ ಸ್ನೇಹಿತರೇ ನಿಮಗೆ ಬೆನ್ನ ಹಿಂದೆ ಚೂರಿ ಹಾಕಲಿದ್ದಾರೆ. ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕತೆಯಿಂದಿರಿ.

ಮೀನ : ನೀವು ನೀಡುವ ಸಲಹೆಗಳು ಮಕ್ಕಳಿಗೆ ಉತ್ತಮ ಮಾರ್ಗವನ್ನು ತೋರಿಸುತ್ತದೆ. ಹಣಕಾಸಿನ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿವುದು ಉತ್ತಮ. ಸಂತಾನ ಭಾಗ್ಯವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read