ಹೊಸ ಸ್ಕೂಟರ್​ ಬಿಡುಗಡೆಗೆ ಭರ್ಜರಿ ತಯಾರಿ ನಡೆಸಿದ ಹೋಂಡಾ ಆಕ್ಟೀವಾ

ಇತ್ತೀಚೆಗೆ ಬಿಡುಗಡೆಗೊಂಡ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‌ ಲಕ್ಷಾಂತರ ಗ್ರಾಹಕರ ಹೃದಯವನ್ನು ಗೆದ್ದಿದೆ. 109.51 ಸಿಸಿ ಇಂಧನ ಇಂಜೆಕ್ಷನ್‌ ಎಂಜಿನ್‌ನ್ನು ಒಳಗೊಂಡಿರುವ 6 ಜಿಯ ಎಂಜಿನ್‌ಗಳು 7.8 ಪಿಎಸ್‌ ಶಕ್ತಿಯನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಇದರ ಯಶಸ್ಸಿನ ಬಳಿಕ ಅತಿದೊಡ್ಡ ದ್ವಿಚಕ್ರ ವಾಹನ ಮಾರಾಟ ಕಂಪೆನಿ ಹೋಂಡಾ ಇದೀಗ ಆಕ್ಟಿವಾ 125 H- ಸ್ಮಾರ್ಟ್ ಎಂಬ ವಾಹನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಲು ಸಿದ್ಧತೆ ನಡೆದಿದೆ. ಕಂಪೆನಿಯು ಈ ಹೊಸ ಸ್ಕೂಟರ್​ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.

ಆದರೆ, ಇದರ ಕೆಲವೊಂದು ಫೋಟೋಗಳನ್ನು ಕಂಪೆನಿ ಶೇರ್​ ಮಾಡಿಕೊಂಡಿದ್ದು, ಇದನ್ನು ಗಮನಿಸಿದರೆ, ಹೊಸ ಸ್ಕೂಟರ್​ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಮತ್ತು ವಿನ್ಯಾಸವನ್ನು ಗಮನಿಸಬಹುದಾಗಿದೆ.

ಈ ಹೊಸ ಸ್ಕೂಟರ್​, ನವೀಕರಿಸಿದ ಡಿಜಿಟಲ್ ಇನ್‌ಸೆಟ್ ಸೇರಿದಂತೆ ಕೆಲವು ಗಮನಾರ್ಹ ಬದಲಾವಣೆಗಳೊಂದಿಗೆ ಬರಲಿದೆ ಎಂದು ಫೋಟೋ ನೋಡಿದಾಗ ಗುರುತಿಸುವುದು ಕಷ್ಟವೇನಲ್ಲ,

ಇದು ಬಳಕೆದಾರರಿಗೆ ಪುಷ್​ ಸ್ಟಾರ್ಟ್ ಬಟನ್, ಸ್ಮಾರ್ಟ್‌ಫೈಂಡ್ ವೈಶಿಷ್ಟ್ಯದಂತಹ ಉನ್ನತ ದರ್ಜೆಯ ವೈಶಿಷ್ಟ್ಯಗಳನ್ನು ನೀಡಲಿದೆ ಎನ್ನಲಾಗಿದೆ. ಏತನ್ಮಧ್ಯೆ, ಪ್ರಸ್ತುತ, ಕಂಪೆನಿಯು ಆಕ್ಟಿವಾ 125 ನ ಮೂರು ರೂಪಾಂತರಗಳನ್ನು ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read