ತುಮಕೂರು: ಕಬ್ಬಡಿ ಪಂದ್ಯದಲ್ಲಿ ಬಾಜಿ ಕಟ್ಟಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಹಣ ಕಳೆದುಕೊಂಡಿದ್ದಾರೆ. ಪಂದ್ಯದಲ್ಲಿ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜೊತೆಗೆ ಬಾಜಿ ಕಟ್ಟಿದ್ದ ಸಚಿವ ಪರಮೇಶ್ವರ್ 500 ರೂ. ಕಳೆದುಕೊಂಡಿದ್ದಾರೆ.
ತುಮಕೂರಿನಲ್ಲಿ ಭಾನುವಾರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆದಿದೆ. ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ಮತ್ತು ವಿಜಯಪುರ ತಂಡಗಳು ಮುಖಾಮುಖಿಯಾಗಿವೆ. ದಕ್ಷಿಣ ಕನ್ನಡ ತಂಡ 36- 26 ಅಂಕಗಳಿಂದ ವಿಜಯಪುರ ತಂಡದ ವಿರುದ್ಧ ಜಯಗಳಿಸಿದೆ.
ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಮಾತನಾಡಿದ ಪರಮೇಶ್ವರ್, ನಾನು ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಜೊತೆಗೆ ಬೆಟ್ಟಿಂಗ್ ಮಾಡಿಕೊಂಡಿದ್ದೆ. 500 ರೂ. ಕಳೆದುಕೊಂಡುಬಿಟ್ಟೆ ಎಂದು ಹೇಳಿದ್ದಾರೆ.