Hockey World Cup 2024 : ʻಹಾಕಿ ವಿಶ್ವಕಪ್‌ʼಗೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳ ಪ್ರಕಟ

ನವದೆಹಲಿ : ಒಮಾನ್ ನ ಮಸ್ಕತ್ ನಲ್ಲಿ ನಡೆಯಲಿರುವ ಎಫ್ ಐಎಚ್ ಹಾಕಿ 5 ವಿಶ್ವಕಪ್ ಗಾಗಿ ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳನ್ನು ಪ್ರಕಟಿಸಲಾಗಿದೆ. ಪುರುಷರ ತಂಡವನ್ನು ಸಿಮ್ರನ್ಜಿತ್ ಮುನ್ನಡೆಸಿದರೆ, ಮಹಿಳಾ ತಂಡವನ್ನು ರಜನಿ ಎಟಿಮಾರ್ಪು ಮುನ್ನಡೆಸಲಿದ್ದಾರೆ.

ಪಂದ್ಯಾವಳಿಯಲ್ಲಿ, ಮಹಿಳಾ ತಂಡವು ಜನವರಿ 24 ರಿಂದ 27 ರವರೆಗೆ ತಮ್ಮ ಪಂದ್ಯಗಳನ್ನು ಆಡಲಿದ್ದು, ಪುರುಷರ ತಂಡವು ಜನವರಿ 28 ರಿಂದ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಭಾರತದ ಪುರಷರ ತಂಡ

ಒಮಾನ್ ನೆಲದಲ್ಲಿ ನಡೆಯಲಿರುವ ವಿಶ್ವಕಪ್ ಗಾಗಿ ಪುರುಷರ ತಂಡದ ನಾಯಕರಾಗಿ ಸಿಮ್ರನ್ ಜಿತ್ ಸಿಂಗ್ ಆಯ್ಕೆಯಾಗಿದ್ದು, ಡಿಫೆಂಡರ್ ಮನ್ದೀಪ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ತಂಡದಲ್ಲಿ ಸೂರಜ್ ಮತ್ತು ಪ್ರಶಾಂತ್ ಚೌಹಾಣ್ ರೂಪದಲ್ಲಿ ಇಬ್ಬರು ಗೋಲ್ ಕೀಪರ್ ಗಳಿದ್ದಾರೆ. ಮನ್ದೀಪ್ ಮತ್ತು ಮಂಜೀತ್ ಡಿಫೆಂಡರ್ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಹೀಲ್ ಮೌಸಿನ್ ಮತ್ತು ಮಣಿಂದರ್ ಸಿಂಗ್ ಮಿಡ್ ಫೀಲ್ಡರ್ ಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್, ಗುರ್ಜೋತ್ ಸಿಂಗ್, ಸಿಮ್ರನ್ಜೀತ್ ಮತ್ತು ಉತ್ತಮ್ ಸಿಂಗ್ ಫಾರ್ವರ್ಡ್ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಭಾರತದ ಮಹಿಳಾ ತಂಡ

ರಜನಿ ಎಟಿಮಾರ್ಪು ವಿಶ್ವಕಪ್ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ. ಮಹಿಮಾ ಚೌಧರಿ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ಅಜ್ಮಿನಾ ಕುಜುರ್, ರುತಾಜಾ ಮತ್ತು ದೀಪಿಕಾ ಸೌರಂಗ್ ಅವರನ್ನು ಫಾರ್ವರ್ಡ್ ಆಟಗಾರ್ತಿಯರಾಗಿ ಸೇರಿಸಲಾಗಿದೆ. ಮಹಿಮಾ, ಜ್ಯೋತಿ ಮತ್ತು ಅಕ್ಷತಾ ಅವರನ್ನುಆಯ್ಕೆ ಮಾಡಲಾಗಿದೆ.  ಭಾರತ ಮಹಿಳಾ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ನಮೀಬಿಯಾ, ಪೋಲೆಂಡ್ ಮತ್ತು ಅಮೆರಿಕ ವಿರುದ್ಧ ಸೆಣಸಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read