ಹಿಂದೂ ಧರ್ಮಕ್ಕೆ ಸೊಳ್ಳೆಗಳನ್ನೆಲ್ಲಾ ನುಂಗಿ ಜೀರ್ಣಿಸಿಕೊಳ್ಳುವ ಶಕ್ತಿ ಇದೆ : ಸಂಸದ ಪ್ರತಾಪ್ ಸಿಂಹ ಕಿಡಿ

ಮೈಸೂರು : ಹಿಂದೂ ಧರ್ಮಕ್ಕೆ ಸೊಳ್ಳೆಗಳನ್ನೆಲ್ಲಾ ನುಂಗಿ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸನಾತನ ಧರ್ಮದ ವಿಚಾರವಾಗಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕೆಲವರಿಗೆ ಹಿಂದೂ ಧರ್ಮದ ಬಗ್ಗೆ ಅರಿವೇ ಇಲ್ಲದೆ, ಜ್ಞಾನ ಇಲ್ಲದೆ ಇಂತಹ ಮಾತುಗಳನ್ನು ಆಡುತ್ತಾರೆ ಎಂದು ಕಿಡಿಕಾರಿದರು.

ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಿಸಲು ಬಿಡುವುದಿಲ್ಲ. ಸಂಘರ್ಷವಾದರೂ ತಡೆಯುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ದಸರಾ ಹೆಸರಿನಲ್ಲಿ ಬೆಟ್ಟದಲ್ಲಿ ಅನಾಚಾರ ಮಾಡಲು ಬಿಡುವುದಿಲ್ಲ ಮಹಿಷಾ ದಸರಾ ನಿಲ್ಲಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಆಯುಕ್ತರಿಗೆ ನೇರವಾಗಿ ಹೇಳುತ್ತಿದ್ದೇನೆ ಎಂದರು.ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಬಿಡಲ್ಲ. ಮಹಿಷ ದಸರಾ ದಿನ ನಾನು ಅಲ್ಲೇ ಇರ್ತೀನಿ.. ಸಂಘರ್ಷ ಆದ್ರೂ ಪರ್ವಾಗಿಲ್ಲ.. ಮಹಿಷ ದಸರಾ ಮಾಡಲು ನಾನು ಬಿಡಲ್ಲ. ಇನ್ನೂ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಡಿಯೂರಪ್ಪ ತೀರ್ಮಾನ ನಾವು ಒಪ್ಪುತ್ತೇವೆ ಎಂದರು.

https://twitter.com/mepratap/status/1700070298882900194

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read