ಕೆನಡಾದಲ್ಲಿ ಹಿಂದೂ ದೇವಾಲಯವನ್ನು ವಿರೂಪಗೊಳಿಸಿರುವುದನ್ನು ಬಲವಾಗಿ ಖಂಡಿಸಿರುವ ಭಾರತ, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ದುಷ್ಕರ್ಮಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಕೆನಡಾ ಅಧಿಕಾರಿಗಳಿಗೆ ತಿಳಿಸಿದೆ.
ಮಿಸ್ಸಿಸೌಗಾ ನಗರದ ರಾಮಮಂದಿರವನ್ನು ಭಾರತ ಮತ್ತು ಪ್ರಧಾನಿ ಮೋದಿ ವಿರೋಧಿ ಘೋಷಣೆಗಳೊಂದಿಗೆ ವಿರೂಪಗೊಳಿಸಲಾಗಿದೆ. ಇದಕ್ಕೆ ಭಾರತೀಯ ಸಮುದಾಯದಾದ್ಯಂತ ವಿರೋಧ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಭಾರತ ವಿರೋಧಿ ಬರಹದ ಮೂಲಕ ಮಿಸ್ಸಿಸೌಗಾದಲ್ಲಿ ರಾಮಮಂದಿರವನ್ನು ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ದುಷ್ಕರ್ಮಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾವು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿದ್ದೇವೆ ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದಾರೆ.
ಕೆನಡಾದಲ್ಲಿ ದ್ವೇಷಕ್ಕೆ ಸ್ಥಳವಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
https://twitter.com/IndiainToronto/status/1625556371121836033?ref_src=twsrc%5Etfw%7Ctwcamp%5Etweetembed%7Ctwterm%5E1625556371121836033%7Ctwgr%5E4e3b672cd30d26a4e8ee46600686fce5b2fea779%7Ctwcon%5Es1_&ref_url=https%3A%2F%2Fzeenews.india.com%2Fworld%2Fcanada-hindu-temple-attack-ram-temple-defaced-with-anti-modi-slogans-in-mississauga-india-demands-action-2573421.html