BIG UPDATE: ಭೀಕರ ಕಾರು ಅಪಘಾತ: ನಾಪತ್ತೆಯಾಗಿದ್ದ ಮಾಜಿ ಮೇಯರ್ ಪುತ್ರ ನದಿಯಲ್ಲಿ ಶವವಾಗಿ ಪತ್ತೆ

ಶಿಮ್ಲಾ: ಶಿಮ್ಲಾದಿಂದ ಸ್ಪಿತಿಗೆ ಪ್ರಯಾಣಿಸುತಿದ್ದ ತಮಿಳುನಾಡು ಮಾಜಿ ಮೇಯರ್ ಪುತ್ರ ಚಿತ್ರ ನಿರ್ದೇಶಕ ವೆಟ್ರಿ ದುರೈಸ್ವಾಮಿ ಕಾರು ನದಿಗೆ ಉರುಳಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 9 ದಿನಗಳ ಬಳಿಕ ವೆಟ್ರಿ ದುರೈಸ್ವಾಮಿ ಶವ ಪತ್ತೆಯಾಗಿದೆ.

ಫೆ.4ರಂದು ಶಿಮ್ಲಾದಿಂದ ಸ್ಪಿತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಕಿನ್ನೌರ್ ಜಿಲ್ಲೆಯಲ್ಲಿ ಸಟ್ಲೆಜ್ ನದಿಗೆ ಬಿದ್ದಿತ್ತು. ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿದ್ದ. ಸಹಪ್ರಯಾಣಿಕ ಗೋಪಿನಾಥ್ ಎಂಬುವವರನ್ನು ರಕ್ಷಿಸಲಾಗಿತ್ತು. ಆದರೆ ಕಾರಿನಲ್ಲಿದ್ದ ವೆಟ್ರಿ ದುರೈಸ್ವಾಮಿ ನಾಪತ್ತೆಯಾಗಿದ್ದರು. ನದಿಯಲ್ಲಿ ಅವರಿಗಾಗಿ ಶೋಧಕಾರ್ಯ ನಡೆಸಲಾಗಿತ್ತು.

ಇದೀಗ 9 ದಿನಗಳ ಬಳಿಕ 45 ವರ್ಷದ ವೆಟ್ರಿ ದುರೈಸ್ವಾಮಿ ಶವ ನದಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಚೆನ್ನೈ ಮಾಜಿ ಮೇಯರ್ ಸೈದೈ ದುರೈಸ್ವಾಮಿ ಕುಟುಂಬ ಹಿಮಾಚಲಪ್ರದೇಶಕ್ಕೆ ಧಾವಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read