ಬೈಕ್ ನಲ್ಲಿ ಪ್ರಯಾಣಿಸುತ್ತಲೇ ಚಲಿಸುತ್ತಿದ್ದ ಟ್ರಕ್ ನಲ್ಲಿದ್ದ ಮಾಲು ಲೂಟಿ; ಕಳ್ಳರ ಕೃತ್ಯದ ವಿಡಿಯೋ ವೈರಲ್

ಬೈಕ್ ನಲ್ಲಿ ಪ್ರಯಾಣಿಸುತ್ತಲೇ ಚಲಿಸುತ್ತಿರುವ ಟ್ರಕ್ ನಲ್ಲಿ ಕಳ್ಳರು ಮಾಲು ಕದ್ದಿರುವ ಘಟನೆ ಬೆಚ್ಚಿಬೀಳಿಸಿದೆ.

ಕ್ಯಾಮೆರಾದಲ್ಲಿ ಸೆರೆಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿದ್ದ ಮೂವರು ಕಳ್ಳರು ಚಲಿಸುತ್ತಿದ್ದ ಟ್ರಕ್ ನಲ್ಲಿರುವ ವಸ್ತುಗಳನ್ನು ಲೂಟಿ ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರಕ್ ರಸ್ತೆಯಲ್ಲಿ ಸಾಗುತ್ತಿರುವಾಗ ಕಳ್ಳರು ಟ್ರಕ್‌ನಿಂದ ಸರಕುಗಳನ್ನು ಕದಿಯುತ್ತಿರುವುದನ್ನು ತೋರಿಸುತ್ತದೆ.

ವಿಡಿಯೋದಲ್ಲಿ ಬೈಕ್ ನಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಟ್ರಕ್‌ ಏರಿ ಅದರಲ್ಲಿರುವ ಸರಕಿನ ಮೂಟೆಯನ್ನು ರಸ್ತೆಯ ಮೇಲೆ ಎಸೆಯುತ್ತಾರೆ. ನಂತರ ಅವರಿಬ್ಬರು ವಾಪಪ್ ಚಲಿಸುತ್ತಿರುವ ತಮ್ಮ ಬೈಕ್ ಮೇಲೆ ಕೂರುತ್ತಾರೆ. ನಂತರ ಅವರು ಮಾಲು ಪಡೆಯಲು ತಾವು ಎಸೆದ ಮೂಟೆ ಬಿದ್ದ ಜಾಗಕ್ಕೆ ಹೋಗುತ್ತಾರೆ. ಟ್ರಕ್ ಮುಂದೆ ಸಾಗುತ್ತದೆ.

ರಸ್ತೆಯ ಹೆದ್ದಾರಿಯಲ್ಲಿ ಇಂತಹ ಅಪಾಯಕಾರಿ, ಭಯಾನಕ ಕಳ್ಳತನದ ವಿಡಿಯೋ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

https://twitter.com/SachinGuptaUP/status/1794240983779176485

https://twitter.com/IndiaSuper94108/status/1794247483658502301?ref_src=twsrc%5Etfw%7Ctwcamp%5Etweetembed%7Ctwterm%5E1794247483658502301%7Ctwgr%5E4fdec7b

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read