ಬೆಂಗಳೂರು: ಸಿರಿಗೆರೆ ತರಳಬಾಳು ಬ್ರಹನ್ಮಠದ ಆಸ್ತಿ ಮತ್ತು ಅಧಿಕಾರ ದುರ್ಬಳಕೆ, ಟ್ರಸ್ಟ್ ಡೀಡ್ ರದ್ದು ಸೇರಿ ಅನೇಕ ಆರೋಪಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಅಸಲು ದಾವೆಯಲ್ಲಿ ನೀಡಲಾದ ಮಧ್ಯಂತರ ಅರ್ಜಿಗಳ ಮೇಲಿನ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಹಿರೇಕೆರೂರಿನ ಎಸ್.ಎಸ್. ಪಾಟೀಲ್ ಸೇರಿದಂತೆ ಎಂಟು ಜನರು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಏರೂರು ಅವರಿದ್ದ ಏಕ ಸದಸ್ಯ ನ್ಯಾಯಪೀಠದಲ್ಲಿ ಗುರುವಾರ ನಡೆಸಿ, ಈ ಕುರಿತಂತೆ ಆದೇಶಿಸಿದೆ. ಸಿರಿಗೆರೆ ತರಳಬಾಳು ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಪ್ರಕರಣದ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಲಾಗಿದೆ.
