ಆರೋಪಿಗೆ ತಿಳಿದ ಭಾಷೆಯಲ್ಲೇ ದಾಖಲೆ ಒದಗಿಸುವುದು ಕಡ್ಡಾಯ: ಹೈಕೋರ್ಟ್

ಬೆಂಗಳೂರು: ಬಂಧಿತ ಆರೋಪಿಗೆ ಬಂಧನದ ಆದೇಶ ದಾಖಲೆಗಳನ್ನು ಆತನಿಗೆ ತಿಳಿದಿರುವ ಭಾಷೆಯಲ್ಲಿ ಒದಗಿಸುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಗೂಂಡಾ ಕಾಯ್ದೆಯಡಿ ರೋಷನ್ ಜಮೀರ್ ಎಂಬುವನನ್ನು ಬಂಧಿಸಿದ ಪೊಲೀಸರ ಕ್ರಮ ಪ್ರಶ್ನಿಸಿ ಆತನ ತಂದೆ ಮಹಮ್ಮದ್ ಶಫಿವುಲ್ಲಾ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗಿಯ ಪೀಠ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ರೋಷನ್ ಗೆ ಅರೇಬಿಕ್, ಉರ್ದು ಭಾಷೆ ಮಾತ್ರ ಗೊತ್ತಿದೆ. ಆ ಭಾಷೆಯಲ್ಲಿ ಬಂಧನದ ಆದೇಶದ ದಾಖಲೆಗಳನ್ನು ಪೊಲೀಸರು ಒದಗಿಸಿಲ್ಲ ಎಂಬ ಕಾರಣಕ್ಕೆ ರೋಷನ್ ಜಮೀರ್ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದೆ.

ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಒಳಗಾದ ಆರೋಪಿ ತನ್ನ ಬಂಧನದ ಆದೇಶದ ವಿರುದ್ಧ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಅವಕಾಶವಿದೆ. ಹಾಗಾಗಿ ಬಂಧನ ಪ್ರಾಧಿಕಾರ ಆರೋಪಿಗೆ ತಿಳಿಸಿರುವ ಭಾಷೆಯಲ್ಲಿ ಬಂಧನದ ಆದೇಶ ಪ್ರತಿ ಮತ್ತು ಸಂಬಂಧಿಸಿದ ಇತರೆ ದಾಖಲೆಗಳನ್ನು ಒದಗಿಸಬೇಕು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read