ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ: ಆರೋಪಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ. ಕಂಪನಿಯನ್ನು ಕೈಬಿಟ್ಟು ಉದ್ಯೋಗಿಗಳನ್ನು ಆರೋಪಿಯಾಗಿಸುವಂತಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.

ಕದ್ದ ಒಡವೆ ಖರೀದಿ ಮಾಡಿದ ಆರೋಪ ಹೊರಿಸಿ ಅಟ್ಟಿಕಾ ಗೋಲ್ಡ್ ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲೆ ಕೇಸ್ ದಾಖಲಿಸಲಾಗಿತ್ತು. ವಿಜಯನಗರ ಠಾಣೆ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದರು. ಕಂಪನಿಯ ವಿರುದ್ಧ ಯಾವುದೇ ಕೇಸು ದಾಖಲಿಸಿರಲಿಲ್ಲ. ಉದ್ಯೋಗಿಗಳ ಮೇಲೆ ಮಾತ್ರವೇ ಪ್ರಾತಿನಿಧಿಕ ಹೊಣೆ ಸರಿಯಲ್ಲ ಎಂದು ಕೋರ್ಟ್ ಹೇಳಿದ್ದು, ಉದ್ಯೋಗಿಗಳ ಮೇಲಿನ ಆರೋಪ ಪಟ್ಟಿಯನ್ನು ಹೈಕೋರ್ಟ್ ರದ್ದು ಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read