ಅತ್ತೆ, ಮಾವನಿಂದ ಜೀವನಾಂಶ ಕೇಳುವ ಹಕ್ಕು ಸೊಸೆಗೆ ಇಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ತನ್ನ ಅತ್ತೆ ಮಾವನಿಂದ ಜೀವನಾಂಶ ಕೇಳುವ ಹಕ್ಕು ಸೊಸೆಗೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬಳ್ಳಾರಿಯ ದಂಪತಿ ಪ್ರಕರಣದಲ್ಲಿ ಪತಿ ನಿಧನರಾದ ನಂತರ ಪತ್ನಿ ತನ್ನ ಪತಿಯ ತಂದೆ, ತಾಯಿಯಿಂದ ಜೀವನಾಂಶ ಕೋರಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ. ಸೊಸೆ ಮತ್ತು ಆಕೆಯ ಮಕ್ಕಳಿಗೆ ಅತ್ತೆ. ಮಾವ ಮಾಸಿಕ 25,000 ರೂ. ಜೀವನಾಂಶ ನೀಡಬೇಕೆಂದು ಅಧೀನ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 125 ರಡಿ ಸೊಸೆಗೆ ತನ್ನ ಅತ್ತೆ, ಮಾವನಿಂದ ಜೀವನಾಂಶ ಕೇಳುವ ಹಕ್ಕಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹುಬ್ಬಳ್ಳಿಯ ಅಬ್ದುಲ್ ಖಾದರ್ ಸಲ್ಲಿಸಿದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ಪರಿಶೀಲಿಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.

ಸಿಆರ್ಪಿಸಿ ಸೆಕ್ಷನ್ 125ರ ಅಡಿ ಪತ್ನಿಗೆ ಜೀವನಾಂಶ ಕೋರುವ ಹಕ್ಕು ಇದೆ. ಅದೇ ರೀತಿ ಪೋಷಕರು ತಮ್ಮ ವಯಸ್ಕ ಮಗನಿಂದ ಜೀವನಾಂಶ ಕೋರಬಹುದುದಾಗಿದೆ. ಅಪ್ರಾಪ್ತ ಮಕ್ಕಳು ಕೂಡ ತಂದೆಯಿಂದ ಜೀವನಾಂಶ ಕೇಳಬಹುದು. ಆದರೆ, ನಿಯಮದಲ್ಲಿ ಎಲ್ಲಿಯೂ ಪತಿ ನಿಧನದ ನಂತರ ಅವರ ತಂದೆ, ತಾಯಿಗಳಿಂದ ಜೀವನಾಂಶ ಪಡೆಯಲು ಅಧಿಕಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಸಿಆರ್ಪಿಸಿ ಸೆಕ್ಷನ್ 12 ರಡಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವಂತಹ ಅಧಿಕಾರವಿಲ್ಲ. ಜೊತೆಗೆ ಪುತ್ರನ ನಿಧನ ನಂತರ ಸೊಸೆಗೆ ಜೀವನಾಂಶ ನೀಡಬೇಕೆಂಬ ನಿಯಮವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಖಾಜಾ ಮೊಯಿನುದ್ದೀನ್ ಅಗಡಿ ಮತ್ತು ತಸ್ಲೀಮಾ ಜಮೀಲಾ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ವತಿ ನಿಧನರಾದ ನಂತರ ಪತಿಯ ಹೆತ್ತವರು ತನ್ನನ್ನು ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಅವರಿಂದ ಜೀವನಾಂಶ ಕೊಡಿಸಬೇಕು ಎಂದು ತಸ್ಲಿಮಾ ಜಮೀಲಾ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಬಳ್ಳಾರಿ ನ್ಯಾಯಾಲಯ ಪತ್ನಿಗೆ 20 ಸಾವಿರ ರೂಪಾಯಿ, ನಾಲ್ವರು ಮಕ್ಕಳಿಗೆ 5 ಸಾವಿರ ರೂ. ಸೇರಿ ಒಟ್ಟು 25 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಯ ಪೋಷಕರಿಗೆ ಆದೇಶ ನೀಡಿದ್ದು, ಅದನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read