ಮಳೆಗಾಲದಲ್ಲಿ ʼಮಧುಮೇಹʼ ಹಾಗೂ ʼತೂಕ ಇಳಿಕೆʼ ಗೆ ಸಹಕಾರಿಯಾಗುತ್ತವೆ ಈ ಹಣ್ಣುಗಳು….!

ವಿಶ್ವಾದ್ಯಂತ ಲಕ್ಷಾಂತರ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೊಂದು ಸೈಲೆಂಟ್​ ಕಿಲ್ಲರ್​ ಕಾಯಿಲೆಯಾಗಿದೆ. ಅದರಲ್ಲೂ ರಕ್ತದಲ್ಲಿ ಅಧಿಕ ಮಟ್ಟದಲ್ಲಿ ಸಕ್ಕರೆ ಹೊಂದಿರುವವರು ಯಾವುದೇ ಆಹಾರ ಸೇವನೆ ಮಾಡುವ ಮುನ್ನ ಜಾಗ್ರತೆ ವಹಿಸಬೇಕು.

ಸದ್ಯ ಈಗ ಮಾನ್ಸೂನ್​ ಕಾಲ ಆರಂಭಗೊಂಡಿದೆ. ಹೀಗಾಗಿ ಈ ಕಾಲಮಾನದಲ್ಲಿ ವಿವಿಧ ರೀತಿಯ ಋತುಮಾನದ ಹಣ್ಣುಗಳು ಆಗುತ್ತದೆ. ಮಧುಮೇಹದಿಂದ ಕೂಡಿರುವವರು ಯಾವೆಲ್ಲ ಹಣ್ಣು ಹಾಗೂ ತರಕಾರಿಗಳನ್ನು ತಿನ್ನಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.

ಪೇರಳೆ

ಪೇರಳೆ ಹಣ್ಣಿನಲ್ಲಿ ಫೈಬರ್ ಅಂಶ ಅಗಾಧವಾಗಿ ಇರುತ್ತದೆ. ಮಧುಮೇಹವನ್ನು ನಿರ್ವಹಿಸುವ ಮತ್ತು ತೂಕವನ್ನು ಕಳೆದುಕೊಳ್ಳುವ ನಿಮಗೆ ಊಟದ ಜೊತೆಯಲ್ಲಿ ಪೇರಳೆಯು ಅದ್ಭುತವಾದ ಸೇರ್ಪಡೆಯಾಗಿದೆ. ಪೇರಳೆಯು ಮಾನ್ಸೂನ್‌ನ ಹಣ್ಣಾಗಿದ್ದು, ಅವುಗಳ ಮಧ್ಯಮ ಗ್ಲೈಸೆಮಿಕ್ ಸೂಚ್ಯಂಕ 38, ಕಡಿಮೆ ಗ್ಲೈಸೆಮಿಕ್ ಲೋಡ್ ಮತ್ತು ಹೆಚ್ಚಿನ ಫೈಬರ್ ಅಂಶದಿಂದಾಗಿ ನೀವು ಅನಾರೋಗ್ಯಕ್ಕೆ ಒಳಗಾಗದೆ ತಿನ್ನಬಹುದು.

ಪೀಚ್

ಪೀಚ್​ ಇದು ಸುವಾಸನೆಯುಕ್ತ ಹಣ್ಣಾಗಿದ್ದು ಮಾನ್ಸೂನ್​​ ಕಾಲದಲ್ಲಿ ಈ ಹಣ್ಣು ಲಭ್ಯ. ಮಧುಮೇಹಿ ಸ್ನೇಹಿ ಆಹಾರ ಪದ್ಧತಿಗೆ ಈ ಹಣ್ಣು ಉತ್ತಮ ಆಯ್ಕೆಯಾಗಿದೆ. ಇದೊಂದು ಪೋಷಕಾಂಶ ಸಮೃದ್ಧ ಹಣ್ಣಾಗಿದ್ದು ಗ್ಲೈಸಮಿಕ್​ ಸೂಚಿಯನ್ನು ಹೊಂದಿದೆ.ಇದರಲ್ಲಿ ಕಬ್ಬಿಣಾಂಶ, ವಿಟಾಮಿನ್​ ಸಿ ಹಾಗೂ ಪೊಟ್ಯಾಶಿಯಂ ಅಗಾಧ ಪ್ರಮಾಣದಲ್ಲಿದೆ.

ನೇರಳೆ

ಭಾರತದಲ್ಲಿ ಬೇಸಿಗೆ ಹಾಗೂ ಮಳೆಗಾಲದಲ್ಲಿ ನೇರಳೆ ಹಣ್ಣು ಅಗಾಧ ಪ್ರಮಾಣದಲ್ಲಿ ಬೆಳೆಯುತ್ತದೆ. ಇದರಲ್ಲಿ ಹೆಚ್ಚಿನ ಫೈಬರ್​ ಅಂಶ ಕಡಿಮೆ ಗ್ಲೈಸಮಿಕ್​ ಅಂಶವಿದೆ. ಈ ಹಣ್ಣು ಮಧುಮೇಹಿಗಳಿಗೆ ಸುರಕ್ಷಿತವಾಗಿದೆ. ಫೈಬರ್​ ಅಂಶ ಹೆಚ್ಚಿರುವ ಈ ಹಣ್ಣಿನ ಸೇವನೆಯಿಂದ ಹೊಟ್ಟೆ ತುಂಬಿದಂತೆ ಭಾಸವಾಗುವ ಹಿನ್ನೆಲೆಯಲ್ಲಿ ಈ ಹಣ್ಣು ತೂಕ ಇಳಿಕೆಗೆ ಸಹಕಾರಿ.

ಮೂಸಂಬಿ

ಇದು ಸಿಟ್ರಸ್​ ಜಾತಿಗೆ ಸೇರಿದ ಹಣ್ಣಾಗಿದ್ದು ಇದರಲ್ಲಿ ವಿಟಾಮಿನ್ ಸಿ ಹಾಗೂ ಫೈಬರ್ ಅಂಶ ಅಗಾಧವಾಗಿದೆ. ಮೂಸಂಬಿ ಹಣ್ಣು ಮಧು ಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ.

ಚೆರ್ರಿ

ಈ ಹಣ್ಣಿನಲ್ಲಿ ಫೈಬರ್​ ಅಂಶ ಹೇರಳವಾಗಿದ್ದು ಗ್ಲೈಸಮಿಕ್​ ಅಂಶ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಈ ಹಣ್ಣು ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಸಿಗುತ್ತದೆ. ತೂಕ ಇಳಿಕೆ ಮಾಡುವ ಪ್ರಯತ್ನದಲ್ಲಿರುವ ಮಧುಮೇಹಿಗಳು ತಾಜಾ ಚೆರ್ರಿ ಹಣ್ಣುಗಳನ್ನು ಸೇವಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read