ಸಿನಿ ಪ್ರೇಕ್ಷಕರ ಗಮನ ಸೆಳೆದ ‘ಹೆಜ್ಜಾರು’

ಹರ್ಷ ಪ್ರಿಯ ನಿರ್ದೇಶನದ ಭಗತ್ ಅಲ್ವಾ ಅಭಿನಯದ ‘ಹೆಜ್ಜಾರು’ ಚಿತ್ರ ನಿನ್ನೆಯಷ್ಟೇ ತೆರೆಕಂಡಿದ್ದು, ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಕಾಮಿಡಿ ಕಲಾವಿದನಾಗಿ ಜನಪ್ರಿಯತೆ ಪಡೆದಿದ್ದ ನವೀನ್ ಕೃಷ್ಣ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ. ಭಗತ್ ಅಲ್ವಾ ಕೂಡ ಅದ್ಭುತ ನಟನೆ ಮಾಡಿದ್ದು, ಲವ್ ಸ್ಟೋರಿ ಹಾಗೂ ಸೆಂಟಿಮೆಂಟ್ ಈ ಎಲ್ಲವನ್ನು ಒಳಗೊಂಡ ಈ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.

ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಎಮೋಷನಲ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಗಗನ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ವಿಮಲಾ ಎನ್ ನಿರ್ಮಾಣ ಮಾಡಿದ್ದು, ಸುನೀತಾ ಟಿ ಆರ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಭಗತ್ ಅಲ್ವಾ ಸೇರಿದಂತೆ ಲಿಯೋನಿಲ್ಲಾ ಶ್ವೇತಾ ಡಿಸೋಜಾ, ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಅರುಣಾ ಬಾಲರಾಜ್, ಮುನಿರಾಜ್ ತೆರೆ ಹಂಚಿಕೊಂಡಿದ್ದಾರೆ. ಅಜಿತ್ ಡ್ರಾಕುಲ ಸಂಕಲನ,  ಅಮರ್ ಗೌಡ  ಛಾಯಾಗ್ರಹಣವಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read