ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಕರ್ತವ್ಯದ ವೇಳೆ ವಿದ್ಯುತ್ ಪ್ರವಹಿಸಿ ಹೆಸ್ಕಾಂ ಸಿಬ್ಬಂದಿ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಹೆಸ್ಕಾಂ ಸಿಬ್ಬಂದಿ ಮಾರುತಿ ಹವಲಿ (25) ಎಂದು ಗುರುತಿಸಲಾಗಿದೆ. ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುವಾಗ ವಿದ್ಯುತ್ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಾರುತಿ ಹವಲಿ ಬಲಿಯಾಗಿದ್ದು, ಸುಮಾರು 3 ಗಂಟೆ ಕಂಬದಲ್ಲೇ ಮಾರುತಿ ಮೃತದೇಹ ನೇತಾಡಿದೆ. ಘಟನೆ ನಡೆದು 3 ಗಂಟೆಯಾದರೂ ಯಾವ ಅಧಿಕಾರಿಗಳು ಬರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
You Might Also Like
TAGGED:ಹೆಸ್ಕಾಂ