ಮಳೆಯಿಂದ ಪಾರಾಗಲು ʼಇನ್‌ ಡೋರ್‌ʼ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲವೇಕೆ ಕ್ರಿಕೆಟ್ ? ಇದರ ಹಿಂದಿದೆ ಈ ಕಾರಣ

ಕ್ರಿಕೆಟ್ ಆಟಕ್ಕೆ ವಿಶ್ವಮಟ್ಟದಲ್ಲಿ ಅತಿ ಹೆಚ್ಚಿನ ಕ್ರೇಜ್ ಇದೆ. ಇದು ಇತಿಹಾಸದಲ್ಲಿ ಆಡಿದ ಅತ್ಯಂತ ಹಳೆಯ ಆಟಗಳಲ್ಲಿ ಒಂದಾಗಿದೆ. ಈ ಆಟವನ್ನು ಜಗತ್ತಿನಾದ್ಯಂತ 100 ಕ್ಕೂ ಹೆಚ್ಚು ದೇಶಗಳಲ್ಲಿ ಆಡಲಾಗುತ್ತದೆ ಮತ್ತು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ.

ಆದರೆ ಕೆಲವೊಮ್ಮೆ ಮಳೆಯ ಕಾರಣದಿಂದ ಕ್ರಿಕೆಟ್ ಪಂದ್ಯ ರದ್ದಾದಾಗ ಅಥವಾ ಮುಂದೂಡಿದಾಗ ಆಗುವ ಬೇಸರ ತುಂಬಾ ಹೆಚ್ಚು. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ ಪಂದ್ಯ. ಮೇ 28 ರ ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯ ಕಾರಣದಿಂದ ಸೋಮವಾರಕ್ಕೆ ಮುಂದೂಡಲ್ಪಟ್ಟಿತು.

ಸೋಮವಾರವೂ ಕೂಡ ಹವಾಮಾನ ಪರಿಸ್ಥಿತಿಗಳು ಸೂಕ್ತವಾಗಿರಲಿಲ್ಲ. ಮತ್ತೆ ಮಳೆ ಬರುವ ಭೀತಿಯಿತ್ತು. ಇಂತಹ ಸಮಯದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡುವ ಸಾಮಾನ್ಯ ಪ್ರಶ್ನೆ ಎಂದರೆ ಮಳೆ ವೇಳೆಯಲ್ಲೂ ಯಾವುದೇ ತೊಂದರೆಯಿಲ್ಲದೇ ಕ್ರಿಕೆಟ್ ಆಡಲೂ ಸಾಧ್ಯವಿಲ್ಲವಾ ? ಮಳೆ ಪರಿಣಾಮಗಳನ್ನು ತಪ್ಪಿಸಲು ಕ್ರಿಕೆಟ್ ಸ್ಟೇಡಿಯಂ ಅನ್ನು ಸಂಪೂರ್ಣವಾಗಿ ಮೇಲ್ಛಾವಣಿಯಿಂದ ಏಕೆ ಮುಚ್ಚಬಾರದು ? ಎಂಬುದು.

ಆದರೆ ಇದು ಕಲ್ಪಿಸಿಕೊಂಡಷ್ಟು ಯೋಚಿಸಿದಷ್ಟು ಸುಲಭವಾಗುವುದಿಲ್ಲ. ಏಕೆಂದರೆ ಇತರ ಕ್ರೀಡೆಗಳಿಗಿಂತ ಭಿನ್ನವಾಗಿ ಕ್ರಿಕೆಟ್ ಪಂದ್ಯವು ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ ಮತ್ತು ನೈಸರ್ಗಿಕ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. SENA ದೇಶಗಳಲ್ಲಿರುವಂತೆ ಅಲ್ಲಿನ ಹವಾಮಾನ ಪರಿಸ್ಥಿತಿಗಳಿಂದಾಗಿ ಅದು ಸಾಕಷ್ಟು ಸ್ವಿಂಗ್ ಆಗುತ್ತದೆ. ಆದರೆ ಉಪಖಂಡದಲ್ಲಿ ಇದು ಬಹಳಷ್ಟು ಸ್ಪಿನ್ ಆಗುತ್ತದೆ.

ಇದರ ಹಿಂದಿನ ಮತ್ತೊಂದು ಪ್ರಮುಖ ಕಾರಣವೆಂದರೆ ಬಜೆಟ್. ಕ್ರಿಕೆಟ್ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಅನೇಕ ದೇಶಗಳು ಈ ಕ್ರೀಡೆಯನ್ನು ಅಳವಡಿಸಿಕೊಳ್ಳುತ್ತಿವೆ ಎಂಬ ವಾಸ್ತವದ ಹೊರತಾಗಿಯೂ, ಆಯಾ ಮಂಡಳಿಗಳು ಮುಚ್ಚಿದ ಸ್ಟೇಡಿಯಂಗಳಲ್ಲಿ ಕ್ರಿಕೆಟ್ ಆಡಿಸಲು ಸಾಕಷ್ಟು ಹಣ ಬೇಕಾಗಿರುವುದರಿಂದ ಇನ್ನೂ ಈ ಕ್ರಮವನ್ನ ಅಳವಡಿಸಿಕೊಂಡಿಲ್ಲ.

ಸಾಂಪ್ರದಾಯಿಕ ಕ್ರಿಕೆಟ್ ಮೈದಾನಕ್ಕೆ ಹೋಲಿಸಿದರೆ ಮುಚ್ಚಿದ ಕ್ರೀಡಾಂಗಣವನ್ನು ನಿರ್ಮಿಸಲು ದುಪ್ಪಟ್ಟು ಹಣ ಬೇಕಾಗಿ ದುಬಾರಿಯಾಗಲಿದೆ. ಇದರ ಹಿಂದಿರುವ ಇನ್ನೊಂದು ಪ್ರಮುಖ ಕಾರಣವೆಂದರೆ ಬ್ಯಾಟರ್‌ ಚೆಂಡನ್ನು ಹೊಡೆದ ನಂತರ ಅದು ಎಷ್ಟು ಎತ್ತರಕ್ಕೆ ಹೋಗುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ.

ಒಂದು ವೇಳೆ ಚೆಂಡು ಮೇಲ್ಛಾವಣಿಗೆ ಹೊಡೆದರೆ ಚೆಂಡನ್ನು ಹಿಡಿಯಲು ಫೀಲ್ಡರ್‌ಗೆ ತುಂಬಾ ಕಷ್ಟವಾಗುತ್ತದೆ. ಜೊತೆಗೆ ಇನ್ ಡೋರ್ ಸ್ಟೇಡಿಯಂನಲ್ಲಿ ಸೂರ್ಯನ ಬೆಳಕನ್ನು ಹೊಂದಿರುವುದಿಲ್ಲ. ಹೀಗಾಗಿ ಕೃತಕ ಬೆಳಕಿನಲ್ಲಿ ಆಡುವುದು ತುಂಬಾ ದುಬಾರಿಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read