ಇಲ್ಲಿದೆ ಆಯಿಲ್ ಫ್ರೀ ಸಮೋಸಾ ಮಾಡುವ ವಿಧಾನ

ಟೀ ಜೊತೆ ಸಮೋಸಾ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಹೆಚ್ಚಿನ ಜನರು ಇದನ್ನು ಹುಳಿ-ಸಿಹಿ ಚಟ್ನಿಯೊಂದಿಗೆ ತಿನ್ನುತ್ತಾರೆ. ಡಯಟ್ ಕಾರಣಕ್ಕೆ, ಅನೇಕರು ಇಷ್ಟವಿದ್ರೂ ಸಮೋಸಾದಿಂದ ದೂರವಿರ್ತಾರೆ. ಇದಕ್ಕೆ ಕಾರಣ, ಸಮೋಸಾ ಕರಿದ ತಿಂಡಿ ಎನ್ನುವುದು. ಎಣ್ಣೆ ಬೇಡ ಎನ್ನುವ ಸಮೋಸಾ ಪ್ರಿಯರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.

ಹೌದು. ಕುಕ್ಕರ್ ನಲ್ಲಿ ಎಣ್ಣೆಯನ್ನು ಬಳಸದೆ ಗರಿಗರಿಯಾದ ಸಮೋಸಾ  ತಯಾರಿಸಬಹುದು. ಇದು ಆರೋಗ್ಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಇದರ ರುಚಿಯೂ ಅದ್ಭುತವಾಗಿರುತ್ತದೆ.

ಆಯಿಲ್ ಫ್ರೀ ಸಮೋಸಾ ಮಾಡಲು ಬೇಕಾಗುವ ಪದಾರ್ಥಗಳು:

1 ಕಪ್ ಮೈದಾ ಹಿಟ್ಟು

4 ಬೇಯಿಸಿದ ಆಲೂಗಡ್ಡೆ

ಅಗತ್ಯವಿರುವಷ್ಟು ಚೀಸ್

1/4 ಟೀ ಚಮಚ ಕೆಂಪು ಮೆಣಸಿನ ಪುಡಿ

1/4 ಟೀ ಚಮಚ ಕೊತ್ತಂಬರಿ ಪುಡಿ

ದೇಸಿ ತುಪ್ಪ

1 ಟೀ ಚಮಚ ಚಾಟ್ ಮಸಾಲ

1/4 ಟೀ ಚಮಚ ಗರಂ ಮಸಾಲಾ

ರುಚಿಗೆ ತಕ್ಕಂತೆ ಉಪ್ಪು

ಕುಕ್ಕರ್

ಮಾಡುವ ವಿಧಾನ :

ಮೊದಲು ಮೈದಾ ಹಿಟ್ಟು, ಉಪ್ಪು ಮತ್ತು ಸ್ವಲ್ಪ ನೀರನ್ನು ಒಂದು ಬಟ್ಟಲಿನಲ್ಲಿ ಹಾಕಿ ಹಿಟ್ಟನ್ನು ಬೆರೆಸಿಕೊಳ್ಳಿ. ಹಿಟ್ಟು ತುಂಬಾ ಗಟ್ಟಿ ಅಥವಾ ತುಂಬಾ ಮೃದುವಾಗಿರಬಾರದು. ಇನ್ನೊಂದು ಬಟ್ಟಲನ್ನು ತೆಗೆದುಕೊಂಡು ಆಲೂಗಡ್ಡೆ, ಪನೀರ್, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಚಾಟ್ ಮಸಾಲಾ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ, ಸ್ಟಫಿಂಗ್ ಮಾಡಬೇಕಾಗುತ್ತದೆ.

ಮೆದುವಾಗಿ ಕಲಿಸಿದ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ಲಟ್ಟಸಿ ಅದರಲ್ಲಿ ಒಂದು ಚಮಚ ಸ್ಟಫಿಂಗ್ ತುಂಬಿಸಿ ಮತ್ತು ತ್ರಿಕೋನದಲ್ಲಿ ಸಮೋಸಾ ಆಕಾರದಲ್ಲಿ ಮಡಚಿ ಮುಚ್ಚಿ. ಇದರ ನಂತರ, ಪ್ರೆಶರ್ ಕುಕ್ಕರ್ ತೆಗೆದುಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಅದನ್ನು ಮೆಶ್ ಸ್ಟ್ಯಾಂಡ್ ನಲ್ಲಿಡಿ.

ಕುಕ್ಕರಿನ ಮುಚ್ಚಳವನ್ನು ಮುಚ್ಚಿ ಮತ್ತು ಅದನ್ನು 10 ನಿಮಿಷಗಳ ಕಾಲ ಬಿಸಿ ಮಾಡಲು ಬಿಡಿ. ಇದರ ನಂತರ, ಒಂದು ತಟ್ಟೆಯಲ್ಲಿ ತುಪ್ಪವನ್ನು ಹರಡಿ. ಸ್ವಲ್ಪ ತುಪ್ಪದೊಂದಿಗೆ ಸಮೋಸವನ್ನು ಗ್ರೀಸ್ ಮಾಡಿ ಮತ್ತೆ ಕುಕ್ಕರ್ ನಲ್ಲಿಟ್ಟು ಕುಕ್ಕರ್ ಮುಚ್ಚಳ ಮುಚ್ಚಿ. ಕನಿಷ್ಠ 15 ರಿಂದ 20 ನಿಮಿಷ ಬೇಯಲು ಬಿಡಿ. ಈಗ ನಿಮ್ಮ ಆಯಿಲ್ ಲೆಸ್ ಸಮೋಸಾ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read