ಇಲ್ಲಿದೆ ಬಿಸಿ ಬಿಸಿ ʼಪಾಲಕ್ ಪಕೋಡʼ ಮಾಡುವ ವಿಧಾನ

ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರಲ್ಲೂ ಪಾಲಕ್ ಎಲೆಯಲ್ಲಿ ತಯಾರಿಸುವ ಎಲ್ಲಾ ಖಾದ್ಯ ಆರೋಗ್ಯಕರ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಪಕೋಡ ಹೇಗೆ ತಯಾರಿಸಬೇಕು ಅನ್ನುವ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಪಾಲಕ್ ಎಲೆಗಳು 10-12
ಅಕ್ಕಿ ಹಿಟ್ಟು – 2 ಟೇಬಲ್ ಚಮಚ
ಕಡಲೇ ಹಿಟ್ಟು – 1 ಕಪ್
ಜೀರಿಗೆ – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಖಾರದ ಪುಡಿ – 1 1/2 ಟೇಬಲ್ ಚಮಚ
ನೀರು – 1 ಕಪ್

ಮಾಡುವ ವಿಧಾನ

ಮೊದಲು ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ.

ಒಂದು ಬೌಲ್‍ ಗೆ ಕಡಲೇ ಹಿಟ್ಟು, ಜೀರಿಗೆ, ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

ಮಿಶ್ರಣಕ್ಕೆ ಸ್ವಲ್ಪ ಬಿಸಿ ಎಣ್ಣೆ ಮತ್ತು ಅಕ್ಕಿ ಹಿಟ್ಟು ಸೇರಿಸಿದರೆ ಪಕೋಡ ಗರಿಗರಿಯಾಗಿ ಬರುತ್ತದೆ.

ನಂತರ ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ತಯಾರಿಸಿಕೊಂಡ ಮಿಶ್ರಣಕ್ಕೆ ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿ, ಮೃದುವಾದ ಬೆಣ್ಣೆಯ ಹದಕ್ಕೆ ತಂದುಕೊಳ್ಳಿ.

ಮಿಶ್ರಣ ಸಿದ್ಧವಾದ ಬಳಿಕ ಪಾಲಕ್ ಎಲೆಯನ್ನು ಅದರಲ್ಲಿ ಅದ್ದಿ ಕಾದಿರುವ ಎಣ್ಣೆಯಲ್ಲಿ ಬಿಡಿ. ಪಕೋಡ ಎರಡು ಮಗ್ಗುಲಲ್ಲಿ ಚೆನ್ನಾಗಿ ಬೇಯುವಂತೆ ನೋಡಿಕೊಳ್ಳಿ. ಬಳಿಕ ತಯಾರಾದ ಪಕೋಡವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ ಸವಿಯಲು ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read