‌ʼಲಿಪ್‌ ಸ್ಟಿಕ್ʼ ಅವಧಿ ಮುಗಿದಿದೆ ಎಂಬುದನ್ನು ಹೀಗೆ ಪತ್ತೆ ಮಾಡಿ

ತುಟಿಯ ಸೌಂದರ್ಯವನ್ನು ಲಿಪ್‌ ಸ್ಟಿಕ್ ಹೆಚ್ಚಿಸುತ್ತದೆ. ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಸೌಂದರ್ಯವರ್ಧಕಗಳಲ್ಲಿ ಲಿಪ್‌ ಸ್ಟಿಕ್ ಕೂಡ ಒಂದು. ಅನೇಕ ಹೆಣ್ಣು ಮಕ್ಕಳಿಗೆ ಅವರದ್ದೇ ಆದ ಕೆಲ ಫೆವರೆಟ್ ಲಿಪ್‌ ಸ್ಟಿಕ್ ಇರುತ್ತದೆ. ಅದನ್ನು ಅನೇಕ ದಿನಗಳಿಂದ ಬಳಸ್ತಿರುತ್ತಾರೆ.

ಆದ್ರೆ ಅದರ ಅವಧಿ ಮುಗಿದಿದೆಯಾ ಎಂಬುದನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಅವಧಿ ಮುಗಿದ ಲಿಪ್‌ ಸ್ಟಿಕ್ ಹಚ್ಚಿದ್ರೆ ತುಟಿ ಸೌಂದರ್ಯ ಹಾಳಾಗುತ್ತದೆ. ಲಿಪ್‌ ಸ್ಟಿಕ್ ಅವಧಿ ಮುಗಿದಿದೆಯಾ ಎಂಬುದನ್ನು ಪತ್ತೆ ಹಚ್ಚುವುದು ಸುಲಭ.

ಲಿಪ್‌ ಸ್ಟಿಕ್ ಮೇಲೆ ಮಾಯಿಶ್ಚರೈಸರ್ ಪದರವು ಕಾಣಿಸಿಕೊಂಡರೆ ಅಥವಾ ಹನಿಗಳು ಕಾಣಿಸಿಕೊಂಡರೆ ಅದು ಹಳೆಯದಾಗಿದೆ ಎಂದರ್ಥ. ಅದನ್ನು ಬದಲಾಯಿಸಲು ಸೂಕ್ತ ಸಮಯ.

ಲಿಪ್‌ ಸ್ಟಿಕ್ ನಿಂದ ಸುವಾಸನೆ ಬರುತ್ತದೆ. ಬೇರೆ ಬೇರೆ ಫ್ಲೇವರ್ ಲಿಪ್‌ ಸ್ಟಿಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದ್ರೆ ಕೆಲ ಲಿಪ್‌ ಸ್ಟಿಕ್ ನಿಂದ ವಾಸನೆ ಬರಲು ಶುರುವಾಗುತ್ತದೆ. ಆಗ ಲಿಪ್‌ ಸ್ಟಿಕ್ ಅವಧಿ ಮುಗಿದಿದೆ ಎಂದು ಅರ್ಥ ಮಾಡಿಕೊಳ್ಳಿ.

ಲಿಪ್‌ ಸ್ಟಿಕ್ ಅವಧಿ 2 ವರ್ಷ. ಕೆಲವೊಮ್ಮೆ 2 ವರ್ಷಗಳ ನಂತ್ರವೂ ಲಿಪ್‌ ಸ್ಟಿಕ್ ಚೆನ್ನಾಗಿರುತ್ತದೆ. ಆದ್ರೆ ಅದನ್ನು ಹಚ್ಚಿದ್ರೆ ತುಟಿಯ ಸೌಂದರ್ಯ ಹಾಳಾಗುತ್ತದೆ.

ಬಿಸಿಲ ಜಾಗದಲ್ಲಿ ಹೆಚ್ಚು ಕಾಲ ಲಿಪ್‌ ಸ್ಟಿಕ್ ಇಟ್ಟರೆ ಅದು ಕೂಡ ಬೇಗ ಹಾಳಾಗುತ್ತದೆ. ಹಾಗೆ ಲಿಪ್‌ ಸ್ಟಿಕ್ ಮೊದಲಿನಂತಿರದೆ ಒಣಗಲು ಶುರುವಾಗಿದ್ದರೆ, ಆ ಲಿಪ್‌ ಸ್ಟಿಕ್ ಬಳಸಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read