ಬೇಸಿಗೆಯಲ್ಲಿ ಕಾಡುವ ಬೆವರ ವಾಸನೆ ನಿವಾರಣೆಗೆ ಇಲ್ಲಿದೆ ಸುಲಭ ದಾರಿ

ಬೇಸಿಗೆ ಬಂತಂದ್ರೆ ವಿಪರೀತ ಬೆವರಿನ ಸಮಸ್ಯೆ. ಅದರಲ್ಲೂ ಕಂಕುಳ ಬೆವರಂತೂ ಮುಜುಗರ ಹುಟ್ಟಿಸುತ್ತೆ. ಕೆಲವರಿಗೆ ಬೆವರು ಅತ್ಯಂತ ದುರ್ನಾತ ಕೂಡ ಬರಬಹುದು. ಬೇಸಿಗೆಯಲ್ಲಿ ಕಂಕುಳಿನಿಂದ ಬೆವರುವುದು ಸಹಜವಾದರೂ ಇದು ಅತಿಯಾದರೆ ವಾಸನೆ ಬರುತ್ತದೆ. ಬೆವರಿನ ವಾಸನೆ ಹೋಗಲಾಡಿಸಲು ಕೆಲವೊಂದು ಸರಳ ಉಪಾಯಗಳಿವೆ.

1. ಅಲೋವೆರಾ ಜೆಲ್‌ ತೆಗೆದುಕೊಂಡು ಕಂಕುಳಿಗೆ ಚೆನ್ನಾಗಿ ಸ್ಕ್ರಬ್‌ ಮಾಡಿ. 30 ನಿಮಿಷ ಹಾಗೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.

2. ನಿಂಬೆರಸಕ್ಕೆ ಬೇಕಿಂಗ್‌ ಸೋಡಾವನ್ನು ಬೆರೆಸಿ ಪೇಸ್ಟ್‌ ತಯಾರಿಸಿಕೊಳ್ಳಿ. ಅದನ್ನು ಕಂಕುಳಿಗೆ ಹಚ್ಚಿಕೊಂಡು 15 ನಿಮಿಷ ಹಾಗೇ ಬಿಟ್ಟು ನಂತರ ನೀರಿನಿಂದ ತೊಳೆದುಕೊಳ್ಳಿ.

3. ಟೊಮ್ಯಾಟೋ ರಸ ಕೂಡ ಅಂಡರ್‌ ಆರ್ಮ್ಸ್‌ ನ ಬೆವರು ವಾಸನೆಯನ್ನು ದೂರ ಮಾಡುತ್ತದೆ. ಟೊಮ್ಯಾಟೋ ರಸವನ್ನು ಕಂಕುಳಿಗೆ ಸವರಿಕೊಂಡು 10 ನಿಮಿಷ ಬಿಟ್ಟು ನೀರಿನಿಂದ ಸ್ವಚ್ಛ ಮಾಡಿ.

4. ಆಪಲ್‌ ಸೈಡರ್‌ ವಿನಿಗರ್‌ ಅನ್ನು ನೀರಿನೊಂದಿಗೆ ಬೆರೆಸಿ ಅದನ್ನು ಕಂಕುಳಿಗೆ ಸವರಿ, ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

5. ಲ್ಯಾವೆಂಡರ್‌ ಆಯಿಲ್‌ ನಿಂದ ಮಸಾಜ್‌ ಮಾಡಿದ್ರೆ ಕಂಕುಳ ಬೆವರು ವಾಸನೆ ಕಡಿಮೆಯಾಗುತ್ತದೆ.

6. ಕಂಕುಳಿಗೆ ತೆಂಗಿನೆಣ್ಣೆ ಹಚ್ಚಿ ಸುಮಾರು 15 ನಿಮಿಷ ಮಸಾಜ್‌ ಮಾಡಿ. 30 ನಿಮಿಷಗಳವರೆಗೆ ಹಾಗೇ ಬಿಟ್ಟು ನಂತರ ಸಾಬೂನು ಹಚ್ಚಿ ತೊಳೆದುಕೊಳ್ಳಿ.

7. ಆಲೂಗಡ್ಡೆ ಸಿಪ್ಪೆಯನ್ನು ಕಂಕುಳಿಗೆ ಸ್ಕ್ರಬ್‌ ಮಾಡುವುದರಿಂದ್ಲೂ ಬೆವರು ವಾಸನೆಯಿಂದ ಮುಕ್ತಿ ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read