ಶನಿ ದೋಷ ಪರಿಹರಿಸಲು ಇಲ್ಲಿದೆ ಉಪಾಯ: ಶನಿವಾರ ಜೇಬಿನಲ್ಲಿರಲಿ ಈ ಒಂದು ವಸ್ತು

ಶನಿ ದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ. ಶನಿ ದೇವಸ್ಥಾನಗಳ ಮುಂದೆ ಭಕ್ತರ ದೊಡ್ಡ ಸಾಲಿರುತ್ತದೆ. ಶನಿ ದೋಷವುಳ್ಳವರು ಶನಿ ಪೂಜೆ ಮಾಡ್ತಾರೆ. ಪೂಜೆ ಮಾಡಲು ಸಾಧ್ಯವಾಗದವರಿಗೆ ಸುಲಭ ಉಪಾಯ ಇಲ್ಲಿದೆ.

ಶನಿ ದೇವರಿಗೆ ಪ್ರಿಯವಾದ ಒಂದು ವಸ್ತುವನ್ನು ನಿಮ್ಮ ಪರ್ಸ್ ಅಥವಾ ಬ್ಯಾಗ್ ನಲ್ಲಿಟ್ಟುಕೊಂಡರೆ ಸಾಕು. ಸಂಜೆಯೊಳಗೆ ಫಲಿತಾಂಶ ತಿಳಿಯುತ್ತೆ.

ಶನಿ ದೇವರು ನೀಲಿ ಬಣ್ಣದ ಹೂವು ಪ್ರಿಯ. ಹಾಗಾಗಿ ಭಕ್ತರು ನೀಲಿ ಬಣ್ಣದ ಹೂವನ್ನು ಶನಿದೇವರಿಗೆ ಅರ್ಪಣೆ ಮಾಡ್ತಾರೆ. ಹಾಗೆ ಮಾಡಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಜೇಬಿನಲ್ಲಿ ನೀಲಿ ಬಣ್ಣದ ಹೂವನ್ನು ಇಟ್ಟುಕೊಳ್ಳಿ.

ದುಃಖ ಹಾಗೂ ದೌರ್ಭಾಗ್ಯವನ್ನು ದೂರ ಮಾಡಲು ಶನಿವಾರ ಎಳ್ಳನ್ನು ದಾನ ಮಾಡ್ತಾರೆ. ದಾನ ಮಾಡುವ ಶಕ್ತಿಯಿಲ್ಲದವರು ಎಳ್ಳನ್ನು ಜೇಬು ಅಥವಾ ಪರ್ಸ್ ನಲ್ಲಿಟ್ಟುಕೊಳ್ಳಿ.

ಕಪ್ಪು ಉದ್ದಿನ ಬೇಳೆಯನ್ನು ಜೇಬಿನಲ್ಲಿಟ್ಟುಕೊಳ್ಳುವುದರಿಂದ ದೈಹಿಕ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.

ಶನಿ ಪ್ರಭಾವ ಕಡಿಮೆ ಮಾಡಿಕೊಳ್ಳಲು ಹಾಗೂ ಶನಿ ಕೃಪೆಗೆ ಪಾತ್ರರಾಗಲು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಎಂದು ಶಾಸ್ತ್ರ ಹೇಳಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ಕಪ್ಪು ಅಥವಾ ನೀಲಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಿ.

ಶನಿವಾರ ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಇದು ಸಾಧ್ಯವಾಗದಿದ್ದಲ್ಲಿ ಕಣ್ಣಿಗೆ ಕಾಡಿಗೆಯನ್ನು ಹಚ್ಚಿಕೊಳ್ಳಿ. ಅದೂ ಅಸಾಧ್ಯವೆಂದಾದ್ರೆ ಕಾಡಿಗೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read