ಹಬ್ಬದೂಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ʼಉಪಾಯʼ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಹಬ್ಬಗಳ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ.

ಹಬ್ಬ ಎಂದ ಮೇಲೆ ಮನೆಯಲ್ಲಿ ನಾನಾ ರೀತಿಯ ಭಕ್ಷ್ಯ ಭೋಜನಗಳನ್ನು ಮಾಡಲಾಗುತ್ತದೆ. ಮನೆಯಲ್ಲಿ ರೆಡಿಯಾದ ಅಡುಗೆಯನ್ನು ಹಾಗೆಯೇ ಬಿಡಲಾದೀತೆ? ರುಚಿ ನೋಡೇ ನೋಡುತ್ತಾರೆ. ಸ್ವಲ್ಪ ಜಾಸ್ತಿಯೇ ಸೇವಿಸುತ್ತಾರೆ. ಹೀಗೆ ಜಾಸ್ತಿ ಊಟ ಮಾಡಿದ ಬಳಿಕ ಸಂಕಟ ಅನುಭವಿಸುತ್ತಾರೆ. ನಿಮ್ಮ ಸಂಕಟವನ್ನು ದೂರ ಮಾಡಲು ಸರಳವಾದ ಉಪಾಯ ಇಲ್ಲಿದೆ.

ಹಸಿ ಶುಂಠಿ, ಹಸಿ ಅರಿಶಿಣ, ದಾಲ್ಚಿನ್ನಿ ಚೂರು ಹಾಗೂ ಅರ್ಧ ನಿಂಬೆಹಣ್ಣು ತೆಗೆದುಕೊಳ್ಳಿ. ಮೊದಲಿಗೆ ಹಸಿ ಶುಂಠಿ ಹಾಗೂ ಹಸಿ ಅರಿಶಿಣವನ್ನು ಸಣ್ಣಗೆ ತುರಿದುಕೊಳ್ಳಿ. ಅದನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ಅದಕ್ಕೆ ದಾಲ್ಚಿನ್ನಿ ಚೂರು ಹಾಗೂ ಅರ್ಧ ನಿಂಬೆ ರಸ ಹಾಕಿ 10 ನಿಮಿಷ ಕುದಿಸಿ. ಬಳಿಕ ಸಿದ್ಧವಾಗುವ ಪೇಯವನ್ನು ಸೇವಿಸಿ. ಅರ್ಧ ಗಂಟೆಯೊಳಗೆ ನಿಮ್ಮ ಹೊಟ್ಟೆ ಸರಿ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read