ʼಚಳಿಗಾಲʼದಲ್ಲಿ ಏರುವ ತೂಕ ತಡೆಯಲು ಇಲ್ಲಿದೆ ದಾರಿ

ಚಳಿಗಾಲದಲ್ಲಿ ಅನೇಕರ ತೂಕ ವೇಗವಾಗಿ ಹೆಚ್ಚಾಗುತ್ತದೆ. ಜೀರ್ಣಕ್ರಿಯೆ ಸರಿಯಾಗುವುದು ಇದಕ್ಕೆ ಕಾರಣ. ತಿಂದ ಆಹಾರ ಬೇಗ ಜೀರ್ಣವಾಗುವ ಕಾರಣ ಹಸಿವು ಬೇಗ ಆಗುತ್ತದೆ. ಚಳಿಗಾಲದಲ್ಲಿ ತೂಕ ನಿಯಂತ್ರಣದಲ್ಲಿರಬೇಕು ಎನ್ನುವವರು ಈ ಆಹಾರವನ್ನು ಸೇವನೆ ಮಾಡಬೇಕು.

ಕ್ಯಾರೆಟ್ ನಲ್ಲಿ ಸಾಕಷ್ಟು ಫೈಬರ್ ಇದೆ. ಕ್ಯಾರೆಟ್ ನಲ್ಲಿ ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದನ್ನು ತಿನ್ನುವುದ್ರಿಂದ ಹೊಟ್ಟೆ ತುಂಬುವುದಲ್ಲದೆ ತೂಕ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಬೀಟ್ ರೋಟ್ ಕೂಡ ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ನರೆವಾಗುತ್ತದೆ. 100 ಗ್ರಾಂ ಬೀಟ್ ರೋಟ್ ನಲ್ಲಿ 43 ಕ್ಯಾಲೋರಿ, 0.2 ಗ್ರಾಂ ಕೊಬ್ಬು ಹಾಗೂ 10 ಗ್ರಾಂ ಕಾರ್ಬೋಹೈಡ್ರೇಟ್‌ಗಳಿರುತ್ತವೆ. ಸಲಾಡ್ ಅಥವಾ ಜ್ಯೂಸ್ ರೀತಿಯಲ್ಲಿ ಇದ್ರ ಸೇವನೆ ಮಾಡುವುದ್ರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.

ತಜ್ಞರ ಪ್ರಕಾರ, ದಾಲ್ಚಿನಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದ್ರಿಂದ ತೂಕ ಕಡಿಮೆಯಾಗುತ್ತದೆ.

ಮೆಂತ್ಯ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ನಿಯಂತ್ರಿಸಲು ಬಹಳ ಪ್ರಯೋಜನಕಾರಿ. ದೇಹದ ಚಯಾಪಚಯ ವ್ಯವಸ್ಥೆಯನ್ನು ಇದು ಕಾಪಾಡುತ್ತದೆ. ನೀರಿನಲ್ಲಿ ಮೆಂತ್ಯೆಯನ್ನು ನೆನೆಹಾಕಿ ಆ ನೀರು ಸೇವನೆ ಮಾಡುವುದ್ರಿಂದ ತೂಕ ಇಳಿಕೆಯಾಗುತ್ತದೆ.

ಚಳಿಗಾಲದಲ್ಲಿ ಲಭ್ಯವಿರುವ ಪೇರಲೆ ಹಣ್ಣು ತೂಕ ಇಳಿಸಲು ನೆರವಾಗುತ್ತದೆ. ಪ್ರತಿ ದಿನ ಒಂದು ಪೇರಲೆ ಹಣ್ಣು ಸೇವನೆ ಮಾಡಿದ್ರೆ ಆಸ್ಪತ್ರೆಯಿಂದ ದೂರವಿರಬಹುದು ಎನ್ನಲಾಗುತ್ತದೆ. ಪೇರಲೆ ಹಣ್ಣಿನ ಸೇವನೆಯಿಂದ ಸಾಕಷ್ಟು ಕ್ಯಾಲೋರಿ ಬರ್ನ್ ಆಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read