ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ಜೀವನಶೈಲಿ,‌ ಮಲೀನ ವಾತಾವರಣ ಇದಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ ಕೂದಲು ಉದುರುವುದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಈ ಸಮಸ್ಯೆ ಕಾಡ್ತಿದೆ. ಇದು ಪಾಲಕರನ್ನು ಚಿಂತೆಗೀಡು ಮಾಡಿದೆ. ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ.

ಮಕ್ಕಳಲ್ಲಿ ಭಾಗಶಃ ಕೂದಲು ಉದುರುವಿಕೆಯ ಸ್ಥಿತಿಯನ್ನು ಟ್ರೈಕೊಟಿಲೊಮೇನಿಯಾ ಎಂದು ಕರೆಯಲಾಗುತ್ತದೆ.

ಭ್ರಂಗರಾಜ್ ಎಣ್ಣೆಯಲ್ಲಿರುವ ಮೆಥನಾಲ್ ಎಂಬ ಪೋಷಕಾಂಶವು ಕೂದಲಿನ ಬೆಳವಣಿಗೆಯನ್ನು ಸರಳಗೊಳಿಸುತ್ತದೆ. ಈ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದ್ರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ  ಸುಲಭವಾಗುತ್ತದೆ. ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ನೆಲ್ಲಿಕಾಯಿ ವಿಟಮಿನ್-ಸಿ ಜೊತೆಗೆ ಕ್ವೆರ್ಸೆಟಿನ್ ನಂತಹ ಅನೇಕ ಪಾಲಿಫಿನೋಲಿಕ್ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಪೋಷಕಾಂಶಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ಕೂದಲಿಗೆ ಹಾಕುವುದ್ರಿಂದ ಕೂದಲಿನ ಬೆಳವಣಿಗೆ ಸುಲಭವಾಗುತ್ತದೆ.

ಈರುಳ್ಳಿ ರಸವನ್ನು ಕೂದಲಿಗೆ ಹಾಕುವುದ್ರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಕೂದಲು ಒಡೆಯುವುದನ್ನು ತಡೆಯುತ್ತದೆ. ಮಕ್ಕಳಿಗೆ ಇದು ಪ್ರಯೋಜನಕಾರಿ.

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಡಿ ಮತ್ತು ಇ ಹಾಗೂ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣವಿದೆ. ಬಾದಾಮಿ ಎಣ್ಣೆಯಲ್ಲಿ ಕಂಡುಬರುವ ಈ ಪೋಷಕಾಂಶಗಳು ಕೂದಲು ಉದುರದಂತೆ ನೋಡಿಕೊಳ್ಳುತ್ತವೆ. ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ತೆಂಗಿನ ಎಣ್ಣೆ ಎಲ್ಲರ ಮನೆಯಲ್ಲೂ ಸಿಗುತ್ತದೆ. ಇದ್ರಿಂದ ನೆತ್ತಿಗೆ ಮಸಾಜ್ ಮಾಡಿದ್ರೆ ಕೂದಲು ಉದುರುವುದನ್ನು ತಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read