ಇಲ್ಲಿದೆ ನರ ದೌರ್ಬಲ್ಯಕ್ಕೆ ಪರಿಹಾರ

ಕೆಲವೊಮ್ಮೆ ಚಹಾ ಕುಡಿಯುವಾಗ ಅಥವಾ ಇತರ ಸೂಕ್ಷ್ಮ ಕೆಲಸಗಳನ್ನು ಮಾಡುವಾಗ ನಿಮ್ಮ ಕೈ ನಡುಗಿದಂತಾಗಬಹುದು. ಇದು ನರಗಳು ಕ್ಷೀಣಗೊಳ್ಳುತ್ತಿರುವ ಲಕ್ಷಣಗಳಿರಬಹುದು. ವಯಸ್ಸಾದ ಮೇಲೆ ಇದು ಸಾಮಾನ್ಯವಾದರೂ ಇದರ ಬಗ್ಗೆ ಎಚ್ಚರ ವಹಿಸಬೇಕಾದ್ದು ಬಹಳ ಮುಖ್ಯ.

ಯೋಗ ಮಾಡುವ ಮೂಲಕ ಮತ್ತು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ನೀವು ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಕೈಗಳನ್ನು ವಿಸ್ತರಿಸುವ, ಮೇಲಕ್ಕೆ ಕೆಳಕ್ಕೆ ಮಾಡುವ ವ್ಯಾಯಾಮ, ತಾಡಾಸನ, ಪರ್ವತಾಸನ, ಶಶಂಕಾಸನ, ಶವಾಸನ ಮೊದಲಾದ ವ್ಯಾಯಾಮಗಳನ್ನು ಸರಳವಾಗಿ ಮಾಡಬಹುದು. ಅನುಲೋಮ ವಿಲೋಮ ಮಾಡಿ. ಹತ್ತು ನಿಮಿಷ ಇದಕ್ಕಾಗಿ ಮೀಸಲಿಡಿ. ಧ್ಯಾನ ಅಭ್ಯಾಸ ಮಾಡಿ.

ಅನುಲೋಮ ವಿಲೋಮ ಅತ್ಯಂತ ಶಕ್ತಿಯುತ ಪ್ರಾಣಾಯಾಮ. ಇದರಿಂದ ನಮ್ಮ ನರಮಂಡಲಕ್ಕೆ ವಿಶ್ರಾಂತಿ ಸಿಗುತ್ತದೆ. ಶ್ವಾಸಕೋಶ ಮತ್ತು ಸಂಪೂರ್ಣ ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ವಾತ, ಪಿತ್ತ, ಕಫದ ಸಮಸ್ಯೆಗಳನ್ನು ನಿಯಂತ್ರಿಸಲು ಇದು ಸಹಕಾರಿ. ಅಸ್ತಮಾ ನಿಯಂತ್ರಣಕ್ಕೆ ಮತ್ತು ಮಿದುಳಿನ ಜೀವಕೋಶಗಳ ಪುನಃಶ್ವೇತನಕ್ಕೆ ನೆರವಾಗುತ್ತದೆ.

ಧ್ಯಾನದಿಂದ ಮನಸ್ಸು ಹಗುರಾಗುತ್ತದೆ, ದೇಹ ಶಾಂತಗೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read